Sep 16, 2021, 10:29 AM IST
ಮೈಸೂರು (ಸೆ.16): ದೇವಸ್ಥಾನ ತೆರವು ಕಾರ್ಯಾಚರಣೆಯಿಂದ ರಾಜ್ಯಾದ್ಯಂತ ಸುದ್ದಿಯಾಗಿರುವ ನಂಜನಗೂಡು ತಾಲೂಕು ಹುಚ್ಚಗಣಿಯಲ್ಲಿ 3 ಸಾವಿರ ವರ್ಷದಷ್ಟು ಪುರಾತನವಾದ ಶಿಲಾಯುಗ ಸಂಸ್ಕೃತಿಯ ಸಮಾಧಿ, ಗಂಗರು, ಹೊಯ್ಸಳರ ಕಾಲದ ವೀರಗಲ್ಲು ಪತ್ತೆಯಾಗಿದೆ.
ಪುರಾತನ ದೇವಾಲಯ ಧ್ವಂಸಕ್ಕೆ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಧಿಕಾರಿಗಳಿಂದ ಬೇಕಾಬಿಟ್ಟಿ ತೆರವಾಗುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಬೃಹತ್ ಪ್ರತಿಭಟನೆ ನಡೆಸುತ್ತಿದೆ.
ಮೈಸೂರಲ್ಲಿ 3 ಸಾವಿರ ವರ್ಷದ ಹಿಂದಿನ ದೇಗುಲ ತೆರವು ! ಶಿಲಾಯುಗ ಸಮಾಧಿ, ವೀರಗಲ್ಲು ಪತ್ತೆ
ಶಿಲಾಯುಗ ಸಂಸ್ಕೃತಿಯ ಸಮಾಧಿಗಳಲ್ಲಿ ಒಂದಾದ ಹಾಸುಬಂಡೆ ಸಮಾಧಿ, ಅವಶೇಷಗಳು, 9 ರಿಂದ 10ನೇ ಶತಮಾನದ ಗಂಗರು, 11 ಮತ್ತು 12ನೇ ಶತಮಾನದ ಹೊಯ್ಸಳರ ಕಾಲದ 5 ವೀರಗಲ್ಲು ಪತ್ತೆಯಾಗಿದೆ. ಸುಮಾರು 3000 ವರ್ಷಗಳ ಬೃಹತ್ ಶಿಲಾಯುಗ ಸಂಸ್ಕೃತಿಯ ಸಮಾಧಿ ನಮೂನೆಗಳಲ್ಲಿ ಒಂದಾದ ಹಾಸುಬಂಡೆ ಸಮಾಧಿ, ಮಡಿಕೆ ಚೂರುಗಳು, ಹಗೇವುಗಳು ಹಾಗೂ 9-10ನೇ ಶತಮಾನದ ಗಂಗರ, 11-12ನೇ ಶತಮಾನದ ಹೊಯ್ಸಳರ ಕಾಲದ 5 ವೀರಗಲ್ಲುಗಳು ಶೋಧನೆಯಾಗಿವೆ.