ಈದ್ಗಾ ಮೈದಾನದಲ್ಲಿ ಧ್ವಜಾರೋಹಣಕ್ಕೆ ಪಟ್ಟು ಹಿಡಿದ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು
ಬೆಂಗಳೂರು(ಆ.11): ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ದಿನಕ್ಕೊಂದು ತಿರುವು ಸಿಗುತ್ತಿದೆ. ಗಣೇಶನ ಗಲಾಟೆ, ಗೋಡೆ ಗದ್ದಲದ ನಡುವೆ ಧ್ವಜಾರೋಹಣಕ್ಕೆ ಜಟಾಪಟಿ ನಡೆದಿದೆ. ಆ. 15 ರಂದು ಧ್ವಜಾರೋಹಣಕ್ಕೆ ಎರಡೂ ಸಮುದಾಯಗಳು ಪಟ್ಟು ಹಿಡಿದಿವೆ. ಗಣೇಶೋತ್ಸವ ಆಚರಿಸುತ್ತೇವೆ ಅಂತ ಗಲಾಟೆ ನಡೆದಿತ್ತು. ಗೋಡೆ ಕೆಡುವುಬೇಕು ಅಂತ ಗದ್ದಲ ಕೂಡ ನಡೆದಿತ್ತು. ಇದೆಲ್ಲದರ ಬಳಿಕ ಧ್ವಜಾರೋಹಣಕ್ಕೆ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಪಟ್ಟು ಹಿಡಿದಿವೆ. ಹೀಗಾಗಿ ಪೊಲೀಸ್ ಇಲಾಖೆ ಹಿಂದೂ, ಮುಸ್ಲಿಂ ಮುಖಂಡರ ಜತೆ ಪ್ರತ್ಯೇಕ ಸಭೆಯನ್ನ ನಡೆಸಿತ್ತು. ಆದರೆ, ಈ ವಿವಾದ ಶಾಂತಿ ಸಭೆಯ ನಡೆಸಿದ ಬಳಿಕ ತಾರ್ಕಿಕ ಅಂತ್ಯ ಕಾಣುತ್ತಿಲ್ಲ.
ಮಿಸ್ಟರ್ ಬ್ಲಾಕ್‌ಮೇಲರ್, ಅದೇನೋ ಬಿಚ್ಚಿಡ್ತಿಯೋ ಬಿಚ್ಚಿಡಪ್ಪ: ಎಚ್‌ಡಿಕೆಗೆ ಅಶ್ವತ್ಥನಾರಾಯಣ ಸವಾಲ್