ಆರೋಗ್ಯ ಇಲಾಖೆ ಸಿಬ್ಬಂದಿ ರಸ್ತೆ ಬದಿಯಲ್ಲೇ ಪಿಪಿಇ ಕಿಟ್ ಬಿಸಾಡಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರಾಚಪ್ಪಗೌಡತಾವ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರು (ಜೂ. 17): ಆರೋಗ್ಯ ಇಲಾಖೆ ಸಿಬ್ಬಂದಿ ರಸ್ತೆ ಬದಿಯಲ್ಲೇ ಪಿಪಿಇ ಕಿಟ್ ಬಿಸಾಡಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರಾಚಪ್ಪಗೌಡತಾವ ಗ್ರಾಮದಲ್ಲಿ ನಡೆದಿದೆ
.
ಕೋವಿಡ್ 19 ಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದು ಅಂತ್ಯ ಸಂಸ್ಕಾರ ಮಾಡಿ ವಾಪಸಾಗುವಾಗ ಈ ಘಟನೆ ನಡೆದಿದೆ. ಕೊರೊನಾಗೆ ಬಲಿಯಾದ ವ್ಯಕ್ತಿ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದು ಅಲ್ಲಿಯೇ ಮೃತಪಟ್ಟಿದ್ದರು. ಅಂಬುಲೆನ್ಸ್ ಮೂಲಕ ಕರೆದುಕೊಂಡು ಬಂದು ಮಧ್ಯರಾತ್ರಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ವಾಪಸ್ ಹೋಗುವಾಗ ಪಿಪಿಇ ಕಿಟ್‌ನ್ನು ಉಚ್ಚಾ ಗ್ರಾಮದ ಬಳಿ ಬಿಸಾಡಿ ಹೋಗಿದ್ದಾರೆ.