Guddada Mallapura Mutt : ಶತಮಾನಗಳ ಇತಿಹಾಸವಿರುವ ಇಲ್ಲಿ ಬಸವಣ್ಣನೇ ಪೀಠಾಧಿಪತಿ

Nov 30, 2021, 10:00 AM IST

ಹಾವೇರಿ (ನ.30): ಈ ಪ್ರಸಿದ್ಧ ಮಠದಲ್ಲಿ ಎತ್ತುಗಳೇ ಪಿಠಾಧಿಪತಿಗಳು. ಶತಮಾನಗಳ ಇತಿಹಾಸ ಇರುವ ಹಾವೇರಿ ಜಿಲ್ಲೆಯ ಗುಡ್ಡದ ಮಲ್ಲಾಪುರ ಮಠದಲ್ಲಿ ಎತ್ತುಗಳನ್ನೇ ಪೀಠಾಧಿಪತಿಗಳಾಗಿ ನೇಮಿಸಲಾಗುತ್ತದೆ.ವೃಷಭರೂಪಿ ಶ್ರೀಗಳು ಪುನರ್ಜನ್ಮ ತಾಳುತ್ತಾರೆ ಎನ್ನುವ ನಂಬಿಕೆ ಇದ್ದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಈ ಸಂಪ್ರದಾಯ.  

ಮಠಗಳ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ

ಮಠದ ಸುತ್ತಮುತ್ತಲಿನ ಹಳ್ಳುಗಳ ಗೋವುಗಳ ಹೊಟ್ಟೆಯಲ್ಲಿ  ಜನಿಸುತ್ತಾರೆ ಎನ್ನುವ ನಂಬಿಕೆ ಇದೆ. ಇದರಿಂದ ಕರು ಜನಿಸಿದ ಬಳಿಕ ಹಾಲು ಕುಡಿಯದೇ ಉಪವಾಸ ಮಾಡಲಾಗುತ್ತದೆ. ಬಳಿಕ ಹುಟ್ಟಿದಕರುವಿಗೆ ಲಿಂಗಧಾರಣೆ ಮಾಡಲಾಗುತ್ತದೆ.  ಸಾಕ್ಷಾತ್ ಬಸವಣ್ಣನೇ ಈ ಊರಿನ ಎಲ್ಲರ ಆರಾಧ್ಯ ದೈವವಾಗಿದ್ದು ಅತ್ಯಂತ ಭಕ್ತಿಪೂರ್ವಕವಾಗಿ ನಡೆದುಕೊಳ್ಳಲಾಗುತ್ತದೆ. ಇಲ್ಲಿ ನಡೆಯುವ ಪೂಜೆಗಳು ವಿಶೇಷವಾಗಿದ್ದು ಮನೆ ಮುಂದೆ ರಂಗೋಲಿ ಹಾಕ, ದೀಪ ಹಚ್ಚಿ ಕಳಶ ಹಿಡಿದು ದೇವರ ಬರುವಿಕೆಗಾಗಿ ಇಲ್ಲಿ  ಜನರುಕಾಯುತ್ತಿರುತ್ತಾರೆ