ಜಮೀನು ವಿವಾದ: ತಹ​ಸೀ​ಲ್ದಾರ್‌ ಎದುರು ಗ್ರಾಪಂ ಸದಸ್ಯ ಆತ್ಮಹತ್ಯಗೆ ಯತ್ನ

ಜಮೀನು ವಿವಾದ: ತಹ​ಸೀ​ಲ್ದಾರ್‌ ಎದುರು ಗ್ರಾಪಂ ಸದಸ್ಯ ಆತ್ಮಹತ್ಯಗೆ ಯತ್ನ

Published : Jun 25, 2022, 04:58 PM IST

ನ್ಯಾಮತಿ: ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್‌ ಎದುರಲ್ಲಿಯೇ ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್‌ ನಾಯ್ಕ ಎಂಬುವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿ​ಸಿದ ಘಟನೆ ನಡೆ​ದಿದೆ. 

ದಾವಣಗೆರೆ (ಜೂ. 25): ನ್ಯಾಮತಿ (Nyamathi) ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್‌ ಎದುರಲ್ಲಿಯೇ ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್‌ ನಾಯ್ಕ ಎಂಬುವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿ​ಸಿದ ಘಟನೆ ನಡೆ​ದಿದೆ. ಶಿವಮೊಗ್ಗ ತಾಲೂಕು ನಾರಾಯಣಪುರ ಗ್ರಾಪಂ ಸದಸ್ಯ ಲೋಕೇಶ್‌ ನಾಯ್ಕ ಮತ್ತು ಚಿಕ್ಕ ದೊಡ್ಡಪ್ಪನ ಮಕ್ಕಳಾದ ಸುರೇಶ್‌ ನಾಯ್ಕರಿಗೆ ಜಮೀನು ವಿಚಾರದಲ್ಲಿ ಶುಕ್ರವಾರ ತಹಸೀಲ್ದಾರ್‌ ಕೋರ್ಟ್‌ನಲ್ಲಿ ಪ್ರಕ​ರ​ಣದ ವಿಚಾ​ರಣೆ ಇತ್ತು.

ಸುರೇಶ್‌ ನಾಯ್ಕ ಪರವಾಗಿ ಆದೇಶವಾದ ಹಿನ್ನೆಲೆಯಲ್ಲಿ ಲೋಕೇಶ್‌ ನಾಯ್ಕ ತಹಸೀಲ್ದಾರ್‌ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಾರೆ. ನ್ಯಾಮತಿ ತಾಲೂಕು ಚಿನ್ನಿಕಟ್ಟೆಗ್ರಾಮದ ಪಕ್ಕದ ಲಕ್ಕಿನಕೊಪ್ಪ ಗ್ರಾಮದಲ್ಲಿ ಇವರ ಜಮೀನು ಇದ್ದು ಚಿಕ್ಕ ದೊಡ್ಡಪ್ಪನವರ ಅಣ್ಣ ತಮ್ಮಂದಿರ ಜಗಳದಲ್ಲಿ ನ್ಯಾಮತಿ ತಹಸೀಲ್ದಾರ್‌ ಕೋರ್ಟ್‌ನಲ್ಲಿ ಕೇಸು ಹಾಕಲಾಗಿತ್ತು. ವಿಷಕುಡಿದ ಲೋಕೇಶ್‌ ನಾಯ್ಕನನ್ನು  ನ್ಯಾಮತಿ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ಸೇರಿಸಲಾಗಿದೆ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more