Chikkamagaluru: ಭೂ ಒತ್ತುವರಿದಾರರಿಗೆ ರಿಲೀಫ್?  ಗುತ್ತಿಗೆ ಆಧಾರ ಭೂಮಿ ನೀಡಲು ಮುಂದಾದ ಸರ್ಕಾರ

Chikkamagaluru: ಭೂ ಒತ್ತುವರಿದಾರರಿಗೆ ರಿಲೀಫ್? ಗುತ್ತಿಗೆ ಆಧಾರ ಭೂಮಿ ನೀಡಲು ಮುಂದಾದ ಸರ್ಕಾರ

Published : Apr 29, 2022, 04:25 PM IST

ಚಿಕ್ಕಮಗಳೂರಿನಲ್ಲಿ (Chikkamagaluru) ಸುಮಾರು 11 ಸಾವಿರ ಹೆಕ್ಟೇರ್ಗೂ ಅಧಿಕ ಒತ್ತುವರಿಯಾಗಿದೆ ಎಂಬ ಮಾತಿದೆ. ಅದರಲ್ಲಿ ಬದುಕಿಗಾಗಿ ಮಾಡಿದ ಒತ್ತುವರಿಯಷ್ಟೆ (Land Encrochment) ಭೂಮಿ ಆಸೆಗೆ ಮಾಡಿದ್ದೂ ಇದೆ. ಹಾಗಾಗಿ, ಅರಣ್ಯ ಹಾಗೂ ಕಂದಾಯ ಇಲಾಖೆ ಹಲವು ಬಾರಿ ಒತ್ತುವರಿ ತೆರವಿಗೆ ಮುಂದಾದರೂ ಕೂಡ ಸಾಧ್ಯವಾಗಲಿಲ್ಲ.

ಚಿಕ್ಕಮಗಳೂರು (ಏ. 29): ಕಾಫಿನಾಡಿನಲ್ಲಿ ಹಲವು ದಶಕಗಳಿಂದ ಕಂದಾಯ ಭೂಮಿಯನ್ನ ಆಸೆ ಹಾಗೂ ಬದುಕಿಗಾಗಿ ಒತ್ತುವಾರಿ ಮಾಡಿದ್ದಾರೆ. ಅಕ್ರಮ ಒತ್ತುವರಿಯನ್ನ ಒಕ್ಕಲೆಬ್ಬಿಸೋ ಪ್ರಯತ್ನ ನಡೆಯಿತಾದ್ರು ಅಲ್ಲೊಂದು-ಇಲ್ಲೊಂದು ಬಿಟ್ರೆ ಸಮರ್ಪಕವಾಗಿ ಜಾರಿಯಾಗಿಲ್ಲ. ಹಾಗಾಗಿ, ಸರ್ಕಾರವೇ ಒತ್ತುವರಿದಾರರಿಗೆ ಗುಡ್ ನ್ಯೂಸ ಕೊಡಲು ಮುಂದಾಗಿದ್ದು, ದಶಕಗಳಿಂದ ಆತಂಕದಲ್ಲೇ ಬದುಕುತ್ತಿದ್ದ ಒತ್ತುವರಿದಾರರು ನಿಟ್ಟುಸಿರು ಬಿಟ್ಟಿದ್ದಾರೆ. 

ಸುಮಾರು 11 ಸಾವಿರ ಹೆಕ್ಟೇರ್ಗೂ ಅಧಿಕ ಒತ್ತುವರಿಯಾಗಿದೆ ಎಂಬ ಮಾತಿದೆ. ಅದರಲ್ಲಿ ಬದುಕಿಗಾಗಿ ಮಾಡಿದ ಒತ್ತುವರಿಯಷ್ಟೆ ಭೂಮಿ (land Encrochment) ಆಸೆಗೆ ಮಾಡಿದ್ದೂ ಇದೆ. ಹಾಗಾಗಿ, ಅರಣ್ಯ ಹಾಗೂ ಕಂದಾಯ ಇಲಾಖೆ (Revenue Department) ಹಲವು ಬಾರಿ ಒತ್ತುವರಿ ತೆರವಿಗೆ ಮುಂದಾದರೂ ಕೂಡ ಸಾಧ್ಯವಾಗಲಿಲ್ಲ. ಆದರೂ, ಒತ್ತುವರಿದಾರರು ನಾಳೆ-ನಾಡಿದ್ದು ನಮ್ಮ ಬದುಕು ಏನಾಗುತ್ತೋ ಎಂದು ಆತಂಕದಲ್ಲೆ ಬದುಕುತ್ತಿದ್ದರು. ಅದರಲ್ಲೂ ಕಾಫಿ ಬೆಳೆಯುವ ಮಲೆನಾಡು ಭಾಗದಲ್ಲೇ ಒತ್ತುವರಿ ಒಂದು ದೊಡ್ಡ ಸಮಸ್ಯೆಯಾಗಿತ್ತು.

ಆದ್ರೀಗ, ಕಂದಾಯ ಇಲಾಖೆ ಒತ್ತುವರಿಗೊಂದು ಫುಲ್ಸ್ಟಾಪ್ ಇಡೋದಕ್ಕೆ ಮುಂದಾಗಿರೋದು ಒತ್ತುವರಿದಾರರ ನಿರಾಳತೆಗೆ ಕಾರಣವಾಗಿದೆ. 10 ಎಕರೆಯೊಳಗಿನ ಜಮೀನನ್ನ ಒತ್ತುವರಿ ಮಾಡಿರುವ ರೈತರಿಗೆ ಅದೇ ಜಮೀನನ್ನ ಗುತ್ತಿಗೆ ಆಧಾರದಲ್ಲಿ ನೀಡುವ ತೀರ್ಮಾನಕ್ಕೆ ಸರ್ಕಾರ ಬದ್ಧವಾಗಿದೆ ಎನ್ನಲಾಗಿದ್ದು, ಒತ್ತುವರಿದಾರರು ನಿಟ್ಟುಸಿರು ಬಿಡುವಂತಾಗಿದೆ. ಕೇರಳ ಮಾದರಿಯಲ್ಲೇ ಎಕರೆಗೆ ವಾರ್ಷಿಕ 3 ಸಾವಿರ ಶುಲ್ಕ ವಿಧಿಸಲು ಮುಂದಾಗಿರೋದು ಸರ್ಕಾರದ ಬೊಕ್ಕಸಕ್ಕೂ ಲಾಭ ತರಲಿದೆ ಎಂದು ಹೇಳಲಾಗ್ತಿದೆ. 

ಚಿಕ್ಕಮಗಳೂರು 45 ಸಾವಿರ, ಹಾಸನ 25 ಸಾವಿರ ಹೆಕ್ಟೇರ್ ಹಾಗೂ ಕೊಡಗಿನಲ್ಲೂ ಕೂಡ ಕಂದಾಯ ಭೂಮಿಯನ್ನ ರೈತರು ಒತ್ತುವರಿ ಮಾಡಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ರೈತರಿಗೆ ರಿಲೀಫ್ ಸಿಕ್ಕಿದಂತಾಗಿದೆ. ಆದರೆ, ಈ ಆಫರ್ ಅರಣ್ಯವನ್ನ ಒತ್ತುವರಿ ಮಾಡಿದವರಿಗೆ ಇಲ್ಲ. ಅರಣ್ಯ ಭೂಮಿಯನ್ನ ಒತ್ತುವರಿ ಮಾಡಿ ಕೃಷಿ ಮಾಡುತ್ತಿರುವವರ ಜಮೀನನ್ನ ತೆರವು ಮಾಡುವುದು ಅನಿವಾರ್ಯವಾಗಿದೆ. ಕಂದಾಯ ಭೂಮಿಯನ್ನ ಒತ್ತುವರಿ ಮಾಡಿದವರಿಗೆ ಲೀಸ್ ಸೌಲಭ್ಯ ಸಿಗಲಿದೆ. ಸರ್ಕಾರದ ಈ ಗುತ್ತಿಗೆ ಭೂಮಿ ಬಗ್ಗೆ ಜನನಾಯಕರು ಹೇಳಿಕೆ ಕೊಡ್ತಿದ್ದಾರೆ. ಆದರೆ, ಜಿಲ್ಲಾಧಿಕಾರಿ ಮಾತ್ರ ಈ ಬಗ್ಗೆ ಮಾಹಿತಿ ಬಿಟ್ಟುಕೊಡ್ತಿಲ್ಲ. ಈ ಕುರಿತು ಸರ್ಕಾರದ ಮಟ್ಟದಲ್ಲಿ ನಿರ್ಧಾರ ಆಗಿರಬಹುದು. ಸದ್ಯಕ್ಕೆ ನಮ್ಮ ಗಮನಕ್ಕೆ ಬಂದಿಲ್ಲ ಅಂತಾರೆ.

ಒಟ್ಟಾರೆ, ದಶಕಗಳಿಂದ ಒತ್ತುವರಿ ಮಾಡಿ ಬದುಕು ಕಟ್ಟಿಕೊಂಡಿದ್ದ ರೈತರು ಆತಂಕದಿಂದಲೇ ಜೀವಿಸುತ್ತಿದ್ದರು. ಆದ್ರೀಗ, ಸರ್ಕಾರದ ಈ ನಿರ್ಧಾರ ರೈತರಿಗೆ ಕೊಂಚ ರಿಲೀಫ್ ತಂದಿದೆ. ಏಪ್ರಿಲ್ 29ಕ್ಕೆ ಚಿಕ್ಕಮಗಳೂರಿಗೆ ಆಗಮಿಸುವ ಕಂದಾಯ ಸಚಿವರು ಅದೇ ದಿನ ಸರ್ಕಾರದ ಈ ಮಹಾತ್ವಾಕಾಂಕ್ಷೆಯ ಯೋಜನೆಯನ್ನ ಘೋಷಣೆ ಮಾಡುವುದು ಬಹುತೇಕ ಖಚಿತವಾಗಿದ್ದು, ಸರ್ಕಾರ ರೈತರಿಗೆ ಭೂಮಿಯನ್ನ ಲೀಸ್ ಕೊಡೋದು ಪಕ್ಕಾ ಆದಂತಾಗಿದೆ. ಕೊಡಲಿ ಅನ್ನೋದು ನಮ್ಮ ಉದ್ದೇಶ. ರೈತ ಚೆನ್ನಾಗಿದ್ರೆ ಎಲ್ಲರೂ ಚೆನ್ನಾಗಿರ್ತಾರೆ. 
 

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more