Karwar: ಟ್ಯಾಂಕರ್‌ಗಳಿಗೆ ಬೇಕು ನಿಯಂತ್ರಣ, ಸಾರ್ವಜನಿಕರ ಒತ್ತಾಯ

Karwar: ಟ್ಯಾಂಕರ್‌ಗಳಿಗೆ ಬೇಕು ನಿಯಂತ್ರಣ, ಸಾರ್ವಜನಿಕರ ಒತ್ತಾಯ

Published : Feb 07, 2022, 05:22 PM ISTUpdated : Feb 07, 2022, 05:48 PM IST

ಉತ್ತರಕನ್ನಡ ಜಿಲ್ಲೆಯ ಜನರು‌ ಇದೀಗ ಟ್ಯಾಂಕರ್‌ಗಳನ್ನು ನೋಡಿ ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಪ್ರತೀ ದಿನ-ರಾತ್ರಿ ನೂರಾರು ಸಂಖ್ಯೆಯಲ್ಲಿ ಹೆದ್ದಾರಿಯಲ್ಲಿ ಸಂಚರಿಸುವ ಟ್ಯಾಂಕರ್‌ ಅಪಘಾತಕ್ಕೊಳಗಾಗುತ್ತಿರುವುದು. 

ಉತ್ತರಕನ್ನಡ (ಫೆ, 07): ಜಿಲ್ಲೆಯ ಜನರು‌ ಇದೀಗ ಟ್ಯಾಂಕರ್‌ಗಳನ್ನು ನೋಡಿ ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಪ್ರತೀ ದಿನ-ರಾತ್ರಿ ನೂರಾರು ಸಂಖ್ಯೆಯಲ್ಲಿ ಹೆದ್ದಾರಿಯಲ್ಲಿ ಸಂಚರಿಸುವ ಟ್ಯಾಂಕರ್‌ ಅಪಘಾತಕ್ಕೊಳಗಾಗುತ್ತಿರುವುದು. ಕಳೆದ ಒಂದು ವರ್ಷದ ಅವಧಿಯಲ್ಲೇ 19ರಷ್ಟು ಟ್ಯಾಂಕರ್ ಅಪಘಾತಗಳು ಜಿಲ್ಲೆಯಲ್ಲಿ ಸಂಭವಿಸಿದ್ದು, ಟ್ಯಾಂಕರ್‌ಗಳ ಸಂಚಾರದ ಮೇಲೆ ನಿಯಂತ್ರಣ ಹೇರಲು ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ. 

ಪ್ರವಾಸಿಗರಿಗೆ ಮೆಚ್ಚಿನ ಪ್ರದೇಶವಾಗಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಆಗಾಗ್ಗೆ ಟ್ಯಾಂಕರ್‌ಗಳ ಅಪಘಾತ ಸಂಭವಿಸುತ್ತಲೇ ಇವೆ. ಪ್ರತೀನಿತ್ಯ ಮಂಗಳೂರಿನಿಂದ ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧೆಡೆಗಳಿಗೆ ತೆರಳುವ ಗ್ಯಾಸ್, ಡೀಸೆಲ್, ಪೆಟ್ರೋಲ್, ಮೊಲಾಸಿಸ್ ಸೇರಿದಂತೆ ವಿವಿಧ ಬಗೆಯ ರಾಸಾಯನಿಕಗಳನ್ನು ಸಾಗಿಸುವ ಟ್ಯಾಂಕರ್‌ಗಳು ಹೆಚ್ಚಾಗಿ ಉತ್ತರಕನ್ನಡ ಜಿಲ್ಲೆಯ ಮಾರ್ಗವಾಗಿಯೇ ಸಂಚರಿಸುತ್ತವೆ. ಆದ್ರೆ, ಹೀಗೆ ಸಂಚರಿಸುವ ಟ್ಯಾಂಕರ್‌ಗಳು ಚಾಲಕರ ನಿರ್ಲಕ್ಷ್ಯತನದಿಂದಲೋ ಅಥವಾ ನಿಯಂತ್ರಣ ತಪ್ಪಿಯೋ ಪದೇ ಪದೇ ಅಪಘಾತಕ್ಕೆ ಒಳಗಾಗುತ್ತಿದ್ದು, ಪ್ರತೀ ಬಾರಿ ದೊಡ್ಡ ಗಂಡಾಂತರವನ್ನೇ ಸೃಷ್ಠಿಸುತ್ತಿದೆ. 

ದಕ್ಷಿಣಕನ್ನಡದಲ್ಲಿ ಪೆರ್ನೆಯ ಘಟನೆಯ ಬಳಿಕ 2015ರಲ್ಲಿ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಬರ್ಗಿ ಗ್ರಾಮದಲ್ಲಿ ಸಂಭವಿಸಿದ್ದ ಗ್ಯಾಸ್ ಟ್ಯಾಂಕರ್ ದುರಂತ ಅತೀ ದೊಡ್ಡ ಅವಘಡವಾಗಿದ್ದು, ಇದರಲ್ಲಿ13ಕ್ಕೂ ಅಧಿಕ ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು. ಇನ್ನು ಕಳೆದ 2021ರ ಅಕ್ಟೋಬರ್‌ನಲ್ಲಿ ಯಲ್ಲಾಪುರ ತಾಲ್ಲೂಕಿನ ಅರಬೈಲ್ ಘಟ್ಟದಲ್ಲಿ ಬೆಂಝೀನ್ ಕೊಂಡೊಯ್ಯುತ್ತಿದ್ದ ಟ್ಯಾಂಕರ್ ಅಪಘಾತಕ್ಕೊಳಗಾಗಿ ಸೋರಿಕೆಯಾಗಿದ್ದು, ಎಕರೆಗಟ್ಟಲೇ ಪ್ರದೇಶದಲ್ಲಿ ಅಗ್ನಿ ಆವರಿಸಿಕೊಂಡಿತ್ತು. ಹೀಗೆ ತಿಂಗಳಿಗೊಂದರಂತೆ ಜಿಲ್ಲೆಯ ವಿವಿಧೆಡೆ ಹೆದ್ದಾರಿಯಲ್ಲಿ ಟ್ಯಾಂಕರ್‌ಗಳು ಅಪಘಾತಕ್ಕೀಡಾಗುತ್ತಿದ್ದು, ಕೆಲವೆಡೆ ಜನವಸತಿ ಪ್ರದೇಶಗಳ ಸಮೀಪದಲ್ಲೂ ಅಪಘಾತಗಳು ಸಂಭವಿಸಿವೆ. ಬಹುತೇಕ ಅಪಘಾತಗಳಲ್ಲಿ ಚಾಲಕರ ನಿರ್ಲಕ್ಷ್ಯತನವೇ ಎದ್ದು ಕಾಣುತ್ತಿದ್ದು, ಹೀಗಾಗಿ ಹೆದ್ದಾರಿಯಲ್ಲಿ ಸಂಚರಿಸುವ ಟ್ಯಾಂಕರ್‌ಗಳ ಮೇಲೆ ನಿಗಾವಹಿಸಬೇಕು  ಸಾರ್ವಜನಿಕರು ಮನವಿ ಮಾಡಿದ್ದಾರೆ. 

ಅಂದಹಾಗೆ, 2015ರಲ್ಲಿ ಕುಮಟಾ ಬರ್ಗಿ ದುರಂತ ಸಂಭವಿಸಿದ ಬಳಿಕ ಜಿಲ್ಲಾಡಳಿತ ಜಿಲ್ಲೆಯಲ್ಲಿ ಟ್ಯಾಂಕರ್‌ಗಳ ಸಂಚಾರಕ್ಕೆ ಕೆಲವೊಂದು ನಿಯಮಗಳನ್ನ ರೂಪಿಸಿತ್ತು. ಟ್ಯಾಂಕರ್‌ಗಳಲ್ಲಿ ಚಾಲಕನೊಂದಿಗೆ ಕ್ಲೀನರ್‌ಗಳು ಕಡ್ಡಾಯವಾಗಿ ಇರಲೇಬೇಕು ಹಾಗೂ ರಾತ್ರಿ ವೇಳೆಯಲ್ಲಿ ಟ್ಯಾಂಕರ್‌ಗಳು ಸಂಚರಿಸುವಂತಿಲ್ಲ ಸೇರಿದಂತೆ ಕೆಲವೊಂದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿತ್ತು. ಆದ್ರೆ, ಇತ್ತೀಚಿನ ದಿನಗಳಲ್ಲಿ ಯಾವುದೇ ನಿಯಮಗಳನ್ನು ಪಾಲಿಸದೇ ಟ್ಯಾಂಕರ್‌ಗಳು ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದು, ಜಿಲ್ಲೆಯ ಜನರು ಟ್ಯಾಂಕರ್‌ಗಳನ್ನು ಕಂಡರೆ ಆತಂಕ ಪಡುವಂತಾಗಿದೆ. ಇನ್ನು ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಕೇಳಿದ್ರೆ ಜಿಲ್ಲೆಯಲ್ಲಿ ಕಳೆದೊಂದು ವರ್ಷದ ಅವಧಿಯಲ್ಲಿ 19 ಟ್ಯಾಂಕರ್ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಈ ಅಪಘಾತಗಳ ಆಧಾರದಲ್ಲಿ ತುರ್ತು ಪ್ರತಿಕ್ರಿಯೆ ತಂಡಗಳನ್ನು ರಚಿಸಲು ಸಿದ್ಧತೆ ಮಾಡಿಕೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸಂಚರಿಸುವ ಟ್ಯಾಂಕರ್‌ಗಳ ಮೇಲೆ ನಿಗಾ ಇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more