ಮಕ್ಕಳಿಗೆ ಬಿಡುವಿನ ವೇಳೆ ಮೂರ್ತಿ ರಚನೆ ಕಲೆ ಕಲಿಯುವ ಅವಕಾಶ, ಮಿಸ್ ಮಾಡ್ಕೋಬೇಡಿ.!

Sep 4, 2021, 3:53 PM IST

ಕಾರವಾರ (ಸೆ. 04): ಕೊರೊನಾ ಅಬ್ಬರ ಆರಂಭವಾದಾಗಿನಿಂದ ಮಕ್ಕಳು ಆನ್‌ಲೈನ್ ಕ್ಲಾಸ್‌ ಮೊರೆ ಹೋಗಿದ್ದಾರೆ. ಅಲ್ಲದೇ, ಕೋವಿಡ್ ಭಯದಿಂದಾಗಿ ಮಕ್ಕಳಿಗೆ ದೈಹಿಕ ಚಟುವಟಿಕೆಗಳೇ ಇಲ್ಲದಂತಾಗಿದ್ದು, ಸಾಕಷ್ಟು ಮಕ್ಕಳು ಮೊಬೈಲ್ ಗೇಮ್‌ಗಳ ದಾಸರಾಗಿದ್ದಾರೆ.

ಆದ್ರೆ, ಇಲ್ಲೊಂದು ಕಡೆ ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕವಾಗಿಯೂ ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಅವಕಾಶವನ್ನ ಒದಗಿಸಿಕೊಡಲಾಗಿದೆ. ಕಾರವಾರ ತಾಲೂಕಿನ ಗುರುಪ್ರಸಾದ ಆಚಾರಿ ಎಂಬುವವರು ಮಕ್ಕಳಿಗೆ ಮಣ್ಣಿನ ಗಣಪನ ವಿಗ್ರಹಗಳನ್ನು ಮಾಡುವುದನ್ನು ಕಲಿಸಿಕೊಡುತ್ತಿದ್ದಾರೆ. ಈ ಮೂಲಕ ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುತ್ತಿದ್ದಾರೆ.