Dec 10, 2021, 12:57 PM IST
ಗದಗ (ಡಿ. 10): ಅತಿವೃಷ್ಟಿಯಿಂದ (Heavy Rain) ಕಂಗಾಲಾಗಿರೋ ರೈತರಿಗೆ (Farmers) ಈಗ ಬೆಳೆ ರೋಗ ಗಾಯದ ಮೇಲೆ ಬರೆ ಎಳೆಯುತ್ತಿದೆ. ಗದಗ (Gadag) ತಾಲೂಕಿನ ಮುಳಗುಂದ ಗ್ರಾಮದ ವ್ಯಾಪ್ತಿಯ ಮೆಣಸಿನಕಾಯಿ (Chilly) ಗಿಡಗಳಿಗೆ ನಿಗೂಢ ರೋಗ ಕಾಣಿಸಿಕೊಂಡಿದ್ದು ರೈತ್ರು ಕಂಗಾಲಾಗಿದ್ದಾರೆ..
ಮುಳಗುಂದ ವ್ಯಾಪ್ತಿಯಲ್ಲಿ ಸಾವಿರ ಹೆಕ್ಟೇರ್ ಜಮೀನಲ್ಲಿ ಬೆಳೆದ ಮೆಣಸಿನಕಾಯಿಗೆ ರೋಗ ಕಾಣಿಸಿಕೊಂಡಿದೆ. ಕಾಲಕಾಲಕ್ಕೆ ಗೊಬ್ಬರ ನೀಡಿ ಔಷಧಿ ಸಿಂಪಡಿಸಿದ್ರೂ ಸಸಿಗಳಿಗೆ ರೋಗ ಕಾಣಿಸಿಕೊಂಡಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಔಷಧಿ ಸಿಂಪಡಿಸಿದರೂ ಮೆಣಸಿನ ಗಿಡಕ್ಕೆ ವೈರಸ್ ಅಟ್ಯಾಕ್ ಆಗಿದೆ.
ಕಳೆದ ಮೂವತ್ತು ವರ್ಷದಲ್ಲಿ ಈ ರೀತಿಯ ರೋಗ ಬಾಧೆಯನ್ನ ಕಂಡಿರಲಿಲ್ಲ ಅನ್ನುವ ರೈತರು, ಈ ಬಗ್ಗೆ ತನಿಖೆಯಾಗ್ಬೇಕು. ರೋಗವನ್ನ ಪತ್ತೆಹಚ್ಚಿ ಸೂಕ್ತ ಔಷಧಿ ಕಂಡು ಹಿಡಿಯಬೇಕು ಎಂದಿದ್ದಾರೆ. ಈಗಾಗಲೇ ಎಕರೆಗೆ 25 ರಿಂದ 30 ಸಾವಿರ ರೂಪಾಯಿ ಹಣ ಖರ್ಚುಮಾಡಿ ಮೆಣಸಿನ ಕಾಯಿ ಬೆಳೆಸಿದ್ದಾರೆ.. ಆದರೀಗ ಏಕಾಏಕಿ ನಿಗೂಢರೋಗದಿಂದ ಮೆಣಸಿನಕಾಯಿ ನಾಶವಾಗ್ತಿದ್ದು ರೈತರನ್ನ ಆತಂಕಕ್ಕೀಡುಮಾಡಿದೆ.