Uttara Kannada: 350ಕ್ಕೂ ಹೆಚ್ಚು ಅಡಿಕೆ, ಬಾಳೆ ಗಿಡಗಳನ್ನು ಕಡಿದು ಹಾಕಿದ ಅರಣ್ಯ ಇಲಾಖೆ ಸಿಬ್ಬಂದಿ

Uttara Kannada: 350ಕ್ಕೂ ಹೆಚ್ಚು ಅಡಿಕೆ, ಬಾಳೆ ಗಿಡಗಳನ್ನು ಕಡಿದು ಹಾಕಿದ ಅರಣ್ಯ ಇಲಾಖೆ ಸಿಬ್ಬಂದಿ

Published : Jan 31, 2022, 04:19 PM ISTUpdated : Jan 31, 2022, 04:50 PM IST

ಉತ್ತರಕನ್ನಡ (Uttara Kannada) ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿ ಪಂಚಾಯತ್ ವ್ಯಾಪ್ತಿಯ ಶವೆಗುಳಿ ಗ್ರಾಮದಲ್ಲಿ ರೈತರಿಗೆ ಸೇರಿದ ಸುಮಾರು 350ಕ್ಕೂ ಹೆಚ್ಚು ಅಡಿಕೆ ಮತ್ತು ಬಾಳೆ ಗಿಡಗಳನ್ನು ಕಡಿದು ಹಾಕಿ ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯ ನಡೆಸಿದ್ದಾರೆ. 

ಉತ್ತರ ಕನ್ನಡ (ಜ. 31):  ಅಂಕೋಲಾ (Ankola) ತಾಲ್ಲೂಕಿನ ಹಟ್ಟಿಕೇರಿ ಪಂಚಾಯತ್ ವ್ಯಾಪ್ತಿಯ ಶವೆಗುಳಿ ಗ್ರಾಮದಲ್ಲಿ ರೈತರಿಗೆ ಸೇರಿದ ಸುಮಾರು 350ಕ್ಕೂ ಹೆಚ್ಚು ಅಡಿಕೆ ಮತ್ತು ಬಾಳೆ ಗಿಡಗಳನ್ನು ಕಡಿದು ಹಾಕಿ ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯ ನಡೆಸಿದ್ದಾರೆ. ಶವೆಗುಳಿಯ ಬೆಳ್ಳ ತಮ್ಮಣ್ಣ ಕುಣಬಿ ಮತ್ತು ಸಾತಾವುಳ್ಳು ಕುಣಬಿ ಅವರು ಬೆಳೆಸಿದ ಅಂದಾಜು 5ರಿಂದ 6 ವರ್ಷದ ಅಡಿಕೆ ಮರ ಮತ್ತು ಫಲ ಕೊಡುವಷ್ಟು ದೊಡ್ಡದಾಗಿರುವ ಬಾಳೆ ಗಿಡಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಒಟ್ಟು 8 ಮಂದಿ ಕತ್ತಿ, ಕೊಡಲಿ ಹಿಡಿದುಕೊಂಡು ಬಂದು ಗಿಡಗಳನ್ನು ಕೊಚ್ಚಿ ಹಾಕಿ ಬಿಸಾಕಿದ್ದಾರೆ‌.

ವಿಷಯ ತಿಳಿದ ಕೃಷಿಕರು ಸ್ಥಳಕ್ಕೆ ಓಡೋಡಿ ಬರುವುದರೊಳಗೆ ನೂರಾರು ಮರಗಳು ನೆಲಕ್ಕೊರಗಿವೆ. ಅರಣ್ಯ ಇಲಾಖೆ ಸಿಬ್ಬಂದಿ ಅಡಿಕೆ ಮರ ಹಾಗೂ ಬಾಳೆ ಗಿಡಗಳನ್ನು  ಕಡಿಯುವುದನ್ನು ಮತ್ತೆ ಮುಂದುವರಿಸಿದಾಗ ಕೃಷಿಕರು ಕಡಿಯದಂತೆ ಗೋಗರೆದರೂ ಇಲಾಖೆಯ ಅಧಿಕಾರಿ, ಸಿಬ್ಬಂದಿ ಕೃಷಿಕರ ಮೆಲೆ ದಬ್ಬಾಳಿಕೆ ನಡೆಸಿದ್ದು, ಮುಂದೆ ಬಂದರೆ ಬೂಟು ಗಾಲಿನಿಂದ ಒದೆಯುವುದಾಗಿ ರೈತರನ್ನು ಬೆದರಿಸಿದ್ದಾರೆ.

ಅಧಿಕಾರಿಗಳು ಯಾವೊಂದು ನೋಟೀಸ್ ಕೂಡಾ ನೋಡದೆ ಏಕಾಏಕಿ ಮರ ಗಿಡಗಳನ್ನು ನೆಲಕ್ಕುರುಳಿಸಿದ್ದು, ರೈತರ ಹೊಟ್ಟೆಗೆ ಹೊಡೆದಂತಾಗಿದೆ. ಶವೆಗುಳಿ ಅಂಕೋಲಾ ತಾಲ್ಲೂಕು ಕೇಂದ್ರದಿಂದ ಸುಮಾರು 30 ರಿಂದ 40 ಕಿಲೋ ಮೀಟರ್ ದೂರದಲ್ಲಿ ದಟ್ಟಾರಣ್ಯ ಪ್ರದೇಶದಲ್ಲಿದೆ. ಹಟ್ಟಿಕೇರಿ ಪಂಚಾಯತ್ ವ್ಯಾಪ್ತಿಗೆ ಸೇರುವ ಈ ಗ್ರಾಮದ ನಿವಾಸಿಗಳು ಪಂಚಾಯತ್ ಕಚೇರಿಗೆ ಬರಬೇಕೆಂದರೆ ಸುಮಾರು 10 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ, ಕಲ್ಲು, ಮುಳ್ಳಿನ ಹಾದಿಯಲ್ಲಿ ನಡೆದುಕೊಂಡು ಬರಬೇಕು. ಮೂಲಭೂತ ಸೌಕರ್ಯಗಳೇ ಇಲ್ಲದ ಈ ಊರಿನಲ್ಲಿರುವ ನೂರರಷ್ಟು ಕುಟುಂಬಗಳು 35-40 ವರ್ಷಗಳಿಂದ ಅತಿಕ್ರಮಣವಾಗಿ ನೆಲೆಸಿರುವಂತವರೇ. 

ಎಲ್ಲಾ ಜನರು ಹಿಂದಿನಿಂದಲೇ ಅರಣ್ಯ ಜಾಗದಲ್ಲೇ ಭತ್ತ ಹಾಗೂ ತೋಟಗಾರಿಕೆ ಕೃಷಿ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ, ಇದು ಅರಣ್ಯ ಜಾಗ ಎಂದು ಆಗಾಗ ರೈತರನ್ನು ಪೀಡಿಸುವ ಅರಣ್ಯಾಧಿಕಾರಿಗಳು, ಹಣಕ್ಕಾಗಿ ಅವರ ಮೇಲೆ ದೌರ್ಜನ್ಯ ನಡೆಸುತ್ತಾರೆ. ಈ ಹಿಂದೆಯೂ ಸ್ಥಳೀಯ ರೈತರೋರ್ವರ ಮೇಲೆ ದೌರ್ಜನ್ಯ ನಡೆಸಿರುವ ಅಧಿಕಾರಿಗಳು, ಬಳಿಕ ರೈತನಿಂದ ಹಣ ಪಡೆದುಕೊಂಡು ಸುಮ್ಮನಿದ್ದರು ಎಂದು ಆರೋಪಿಸಲಾಗಿದೆ. ಇದೀಗ ಮತ್ತೆ ಈ ಭಾಗದ ರೈತರ ಬೆಳೆಯನ್ನು ಹಾಳುಗೆಡವಿದ್ದಾರೆ. ರೈತರು ಸುಮಾರು 5-6 ವರ್ಷಗಳಿಂದ ಮಕ್ಕಳಂತೇ ಬೆಳೆಸಿದ್ದ ಅಡಿಕೆ ಮರಗಳ ಪೈಕಿ ಬಹುತೇಕ ಮರಗಳು ಮುಂದಿನ ವರ್ಷ ಫಲ ಕೊಡುವ ಹಂತಕ್ಕೆ ಬಂದಿದ್ದವು. ಈಗ ಅವುಗಳನ್ನು ಅವರ ಕಣ್ಣೇದುರೇ ಅಧಿಕಾರಿಗಳು ಕಡಿದು ಹಾಕಿದ್ದಾರೆ. 
 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more