Chikkamagaluru: ಭರವಸೆ ಮರೆತ ಸಚಿವರು, ಮನೆ ಕಳೆದುಕೊಂಡವರಿಗೆ ಮೂರು ವರ್ಷವಾದ್ರೂ ಮನೆ ಇಲ್ಲ!

Chikkamagaluru: ಭರವಸೆ ಮರೆತ ಸಚಿವರು, ಮನೆ ಕಳೆದುಕೊಂಡವರಿಗೆ ಮೂರು ವರ್ಷವಾದ್ರೂ ಮನೆ ಇಲ್ಲ!

Published : Mar 07, 2022, 04:39 PM IST

 2019ರ ಮಹಾಮಳೆಯಲ್ಲಿ ಮನೆ-ಜಮೀನು ಸೇರಿದಂತೆ ತಮ್ಮ ಶತಮಾನದ ಬದುಕನ್ನೇ ಕಳೆದುಕೊಂಡ ಜನ. 2019ರಲ್ಲಿ ಮೂಡಿಗೆರೆ-ಕಳಸ ಸುತ್ತಮುತ್ತ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆ ಜನರಿಗೆ ನರಕ ತೋರಿಸಿತ್ತು. 

 2019ರ ಮಹಾಮಳೆಯಲ್ಲಿ ಮನೆ-ಜಮೀನು ಸೇರಿದಂತೆ ತಮ್ಮ ಶತಮಾನದ ಬದುಕನ್ನೇ ಕಳೆದುಕೊಂಡ ಜನ. 2019ರಲ್ಲಿ ಮೂಡಿಗೆರೆ-ಕಳಸ ಸುತ್ತಮುತ್ತ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆ ಜನರಿಗೆ ನರಕ ತೋರಿಸಿತ್ತು. ಇತಿಹಾಸದಲ್ಲೇ ಕಂಡು ಕೇಳರಿಯದ ಮಳೆ-ಪ್ರವಾಹ ಕಂಡ ಜನ ಉಟ್ಟ ಬಟ್ಟೆಯಲ್ಲಿ ಮನೆಯನ್ನ ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಿ ಜೀವ ಉಳಿಸಿಕೊಂಡಿದ್ದರು. 

ಮನೆ-ಜಮೀನುಗಳು ಕಣ್ಣೆದುರೇ ಕೊಚ್ಚಿ ಹೋಗಿದ್ವು. ಹತ್ತಾರು ಜನ ಪ್ರಾಣ ಕೂಡ ಕಳೆದುಕೊಂಡಿದ್ದರು. ಈ ವೇಳೆ ಮನೆ-ಜಮೀನು-ತಮ್ಮವರನ್ನ ಕಳೆದುಕೊಂಡು ಸಂತ್ರಸ್ತರಾದ ಜನರಿಗೆ ನಿಮ್ಮೊಂದಿಗೆ ನಾವು ಇದ್ದೇವೆ ಅನ್ನೋ ಭರವಸೆ-ವಿಶ್ವಾಸವನ್ನ ಸರ್ಕಾರ ತುಂಬಿತ್ತು. ಆದ್ರೆ, ಇದೀಗ ಬರೋಬ್ಬರಿ ಮೂರು ವರ್ಷವಾದ್ರು ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಸೂರು ಕಟ್ಟಿಸಿಕೊಡೋ ಕೆಲಸವನ್ನ ಸರ್ಕಾರ ಮಾಡಿಲ್ಲ. ಬಾಡಿಗೆ ಹಣವನ್ನೂ ನೀಡಿಲ್ಲ. ನಾಲ್ಕೈದು ಮಿನಿಸ್ಟ್ರು ಭೇಟಿ ನೀಡಿ ನಾವಿದ್ದೇವೆ., ನಾವಿದ್ದೇವೆ ಅಂದೋರು ಈಗ ಆ ಜನರನ್ನ ಮರೆತಿದ್ದಾರೆ. ಅವರೆಲ್ಲರೂ ಇದೀಗ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ವಿರುದ್ಧ ವಿಧಿಯಿಲ್ಲದೇ ಧಿಕ್ಕಾರ ಕೂಗುತ್ತಿದ್ದು, ದಯಾಮರಣ ಕೊಡಿ ಅಂತ ಸರ್ಕಾರಕ್ಕೆ ಮನವಿ ಸಲ್ಲಿಸುವಂತಾಗಿದೆ.

ಮಲೆನಾಡಲ್ಲಿ ಮಳೆ ಅಬ್ಬರ ಕಂಡು ಅಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಸೇರಿದಂತೆ ದಿನಕ್ಕೊಬ್ಬರಂತೆ ಸಚಿವರು ಎರಡು ವಾರಗಳ ಕಾಲ ಚಿಕ್ಕಮಗಳೂರು ಪ್ರವಾಸ ಮಾಡಿ ಸಂತ್ರಸ್ತರಿಗೆ ಭರವಸೆ ನೀಡಿದ್ರು. ಸಚಿವ ಅಶೋಕ್,  ಮುಂದಿನ ಮಳೆಗಾಲಕ್ಕೆ ಹೊಸ ಮನೆ ಫಿಕ್ಸ್ ಅಂದಿದ್ರು. ಆದ್ರೆ ಸಿಎಂ-ಸಚಿವರ ಈ ಟ್ರಿಪ್, ಹೋದ ಪುಟ್ಟ-ಬಂದ ಪುಟ್ಟ ಎಂಬಂತಾಯ್ತೇ ವಿನಃ ಇಲ್ಲಿಯವರೆಗೂ ಸಂತ್ರಸ್ತರ ಜೀವನದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಸಂತ್ರಸ್ತರನ್ನ ಬಾಡಿಗೆ ಮನೆಯಲ್ಲಿರಲು ಹೇಳಿದ ಸರ್ಕಾರ, ಕೊನೆ ಪಕ್ಷ ಬಾಡಿಗೆ ಹಣವನ್ನ ಕೂಡ ನೀಡಿಲ್ಲ. ಬಾಡಿಗೆ ಹಣ ಕೊಡಿ, ಮನೆಯನ್ನ ಕಟ್ಟಿಸಿಕೊಡಿ ಅಂತ ಪರಿಪರಿಯಾಗಿ ಬೇಡಿಕೊಂಡರು ಜನಪ್ರತಿನಿಧಿಗಳು-ಅಧಿಕಾರಿಗಳು ಮಾತ್ರ ಕುಂಟು ನೆಪ ಹೇಳುತ್ತಾ ದಿನಗಳನ್ನ ದೂಡ್ತಿದ್ದಾರೆಯೇ ಹೊರತು ಸಮಸ್ಯೆಯನ್ನ ಪರಿಹಾರಿಸೋ ಗೋಜಿಗೆ ಹೋಗಿಲ್ಲ.
 

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more