ಕೊಡಗು: ಬೆಂಕಿಯಿಂದ ಬಾಣಲೆಗೆ ನೆರೆ ಸಂತ್ರಸ್ತರ ಪರಿಸ್ಥಿತಿ..!

May 17, 2022, 12:09 PM IST

ಕೊಡಗು(ಮೇ.17):  ಅದು ಪ್ರಕೃತಿ ವಿಕೋಪಕ್ಕೆ ನಲುಗಿದ ಜಿಲ್ಲೆ. ಪ್ರಕೃತಿ ವಿಕೋಪದಿಂದಾಗಿ ಸಾಕಷ್ಟು ಮಂದಿ ಮನೆ ಕಳೆದುಕೊಂಡು ಅತಂತ್ರರಾಗಿದ್ದು, ಮನೆ ಕಳೆದುಕೊಂಡವರಿಗೆ ಜಿಲ್ಲೆಯ ಮಾದಪುರ ಹಾಗೂ ಮದೆನಾಡಿನಲ್ಲಿ ಒಂದಷ್ಟು ಮನೆ ಕೂಡ ನೀಡಲಾಗಿತು. ಆದ್ರೆ ಇದೀಗ ಮನೆ ಇದ್ರು ಕೂಡ ಪುನಃ ಬೀಳುವ ಹಂತದ ಮನೆಗಳಲ್ಲೇ ವಾಸಮಾಡಲು ಮುಂದಾಗುತ್ತಿದ್ದಾರೆ. ಅರೆ ಇವರೆಲ್ಲ ಹೀಗೆ ಮಾಡತ್ತಿರೋದಾದ್ರು ಯಾಕೆ? ಅವರು ಅಲ್ಲೇ ವಾಸಮಾಡಿದ್ರೆ ಆಗೋ ತೊಂದರೆಯಾದ್ರು ಏನು? ಅಂತೀರಾ ಈ ಸ್ಟೋರಿ ನೋಡಿ. 

ಕೊಡಗು ಜಿಲ್ಲೆಯ ಮಡಿಕೇರಿಯ ಇಂದಿರಾ ನಗರ ಹಾಗೂ ಚಾಮುಂಡೇಶ್ವರಿ ನಗರ ಕಳೆದ 2018 ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಅಕ್ಷರಶಃ ನಲುಗಿಹೋಗಿತ್ತು. ರಣಭೀಕರ ಮಳೆಯಿಂದ ಅದೆಷ್ಟೋ ಮಂದಿ ಮನೆಕಳೆದುಕೊಂಡಿದ್ರು. ಅವರಿಗೆಲ್ಲ ಮಾದಪುರ ಸಮೀಪದ ಜಂಬೂರು ಹಾಗೂ ಮಡಿಕೇರಿ ಸಮೀಪದ ಮದೆನಾಡಿನ ಕರ್ಣಗೇರಿಯಲ್ಲಿ   ಮನೆಗಳನ್ನ ನೀಡಿದ್ರು. ಅದ್ಯಾಕೋ ಅವರೆಲ್ಲ ಅಲ್ಲಿಂದ ಪುನಃ ಅದೇ ಅಪಾಯಕಾರಿ ಪ್ರದೇಶದಲ್ಲಿ ಮತ್ತೆ ವಾಸವಾಗತೊಡಗಿದ್ದಾರೆ. ಇದಕ್ಕೆ ಕಾರಣ ಈಗ ಹೊಸದಾಗಿ ನೀಡಿದ ಮನೆಗಳಲ್ಲಿ ಮೂಲಭೂತ ಸೌಕರ್ಯಗಳ‌ ಕೊರತೆಯಿಂದ ಮತ್ತೆ ಇತ್ತ ಮುಖ‌ ಮಾಡುತ್ತಿದ್ದಾರೆ. ಇನ್ನು ಇಂದಿರಾ ನಗರ ಹಾಗೂ ಚಾಮುಂಡೇಶ್ವರಿ ನಗರದಲ್ಲಿ ನೂರಕ್ಕೂ ಹೆಚ್ಚು ಮನೆಗಳು ಇದ್ದು ಅವೂ ಕೂಡ ಅಪಾಯದಲ್ಲಿವೆ. ಇನ್ನೇನು ಮಳೆಗಾಲ‌ ಕೂಡ ಆರಂಭವಾಗುತ್ತಿದ್ದು ನಗರಸಭೆ ಅಪಾಯಕಾರಿ ಮನೆಗಳಿಗೆ ನೋಟಿಸ್‌ ಕೂಡ ಕೊಡಲು ಮುಂದಾಗುತ್ತಾರೆ. ಈ ಪರಿಸ್ಥಿತಿಯಲ್ಲಿ ನಾವು ಹೋಗೊದಾದ್ರು ಎಲ್ಲಿಗೆ. ಅನ್ನೋ ಆತಂಕ ಇಲ್ಲಿ‌ ಜನತೆಗೆ ಕಾಡುತ್ತಿದೆ‌.

ಪ್ರಿಯಾಂಕ್ ಖರ್ಗೆ ಆರೋಪಿಸ್ತಾರೆ, ದಾಖಲೆ ನೀಡಲ್ಲ: ಭಷ್ಟಾಚಾರ ಅಂದ್ರೆ ಸಿದ್ದು ಸರ್ಕಾರ: ಕಟೀಲ್‌

ಕಳೆದ ಬಾರಿ ಕೊಡಗಿಗೆ ಕಂದಾಯ ಸಚಿವ ಆರ್.ಅಶೋಕ್  ಭೇಟಿ ನೀಡುವ ಸಂದರ್ಭ ಗುಡ್ಡಕುಸಿತವಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಆ ಸಂದರ್ಭ ಚಾಮುಂಡೇಶ್ವರಿ ನಗರದ ಕೆಲ ಪ್ರದೇಶಗಳನ್ನ ಅರಣ್ಯ ಪ್ರದೇಶವಾಗಿ ಪರಿವರ್ತಿಸುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ರು. ಇನ್ನು ಮಳೆಗಾಲದ ಆರಂಭವಾಗೋ ಮುಂಚಿತವಾಗಿ ಕೊಡಗು ಉಸ್ತುವಾರಿ ಸಚಿವ ಬಿ.ಸಿ ನಾಗೇಶ್ ಕೊಡಗು ಜಿಲ್ಲೆಗೆ ಭೇಟಿ ನೀಡಿ, ಜಿಲ್ಲಾ‌ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಅಪಾಯಕಾರಿ ಪ್ರದೇಶದಲ್ಲಿರುವ 70 ಕ್ಕೂ ಹೆಚ್ಚಿನ ಕುಟುಂಬಗಳನ್ನ ಜಿಲ್ಲಾಡಳಿತ ಸ್ಥಳಾಂತರಿಸುವ ಕೆಲಸಕ್ಕೆ ಮುಂದಾಗುವಂತೆ ಸೂಚನೆ ನೀಡಿದ್ದಾರೆ. ಇನ್ನೂ ಮನೆಗಳನ್ನ ನೀಡಿದ್ರು ಕೂಡ ಒಂದಷ್ಟು ಮಂದಿ ಹೊಸ ಮನೆಗಳನ್ನ ತೊರೆದು ಹಳೆಮನೆಗಳಲ್ಲಿ ವಾಸಿಸುತ್ತಿರವ ವಿಚಾರ ನಮ್ಮ ಗಮನಕ್ಕೂ ಬಂದಿದ್ದು ಅವರ ವಿರುದ್ಧ ಕೂಡ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ಒಟ್ಟಿನಲ್ಲಿ ಇನ್ನೇನು ಮಳೆಗಾಲ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಜಿಲ್ಲಾಡಳಿತ ಯಾವ ರೀತಿ ಮುಂಜಾಗ್ರತಾ ಕ್ರಮ ವಹಿಸುತ್ತದೆ. ಇಲ್ಲಿನ ಜನತೆಯ ಮನವೊಲಿಸಿ ಅವರನ್ನ ಬೇರೆಡೆಗೆ ಶಿಫ್ಟ್ ಮಾಡ್ತಾರೊ ಅನ್ನೋದನ್ನ ಕಾದು ನೋಡಬೇಕಾಗಿದೆ.