Aug 13, 2023, 7:06 PM IST
ಬೆಂಗಳೂರು (ಆ.13): ಬಿಬಿಎಂಪಿ ಕೇಂದ್ರ ಕಚೇರಿಯ ಗುಣನಿಯಂತ್ರಣ ವಿಭಾಗದಲ್ಲಿ ನಡೆದ ಅಗ್ನಿ ಅವಘಡ ಪರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಬೇಧಿಸಲು ಮುಂದಾಗಿರುವ ಹಲಸೂರು ಗೇಟ್ ಠಾಣೆ ಪೊಲೀಸರು ಯೋಗ್ಯವಲ್ಲದ ಜಾಗದಲ್ಲಿ ಲ್ಯಾಬ್ ನಿರ್ಮಾಣ ಮಾಡಲಾಗಿತ್ತೇ ಎಂಬ ತನಿಖೆಗೆ ಮುಂದಾಗಿದ್ದಾರೆ. ಈ ಹಿಂದೆ ಇದ್ದ ಗೋದಾಮನ್ನು ಲ್ಯಾಬ್ ಅನ್ನಾಗಿ ಮಾಡಿಕೊಳ್ಳಲಾಗಿತ್ತು. ಆದ್ದರಿಂದ ಯೋಗ್ಯವಲ್ಲದ ಜಾಗದಲ್ಲಿ ನಿರ್ಮಾಣ ಮಾಡಲಾಗಿತ್ತೇ, ಲ್ಯಾಬ್ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ (ಪರವಾನಗಿ) ಪಡೆಯಲಾಗಿತ್ತೇ ಎಂಬುದರ ಬಗ್ಗೆ ತನಿಖೆಯನ್ನು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಇಂಜಿನಿಯರ್‌ಗಳಿಗೆ ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಲು ಮುಂದಾಗಿದೆ. ಇನ್ನು ಬಿಬಿಎಂಪಿ ಲ್ಯಾಬ್‌ನಲ್ಲಿ ಡಿ. ಗ್ರೂಪ್ ನೌಕರ ಸುರೇಶ್‌ನಿಗೆ ಪ್ರಯೋಗಾಲದ ಉಸ್ತುವಾರಿ ನೀಡಲಾಗಿತ್ತು. ಜೊತೆಗೆ, ಆತನೇ ಲ್ಯಾಬ್‌ನಲ್ಲಿ ಟೆಸ್ಟಿಂಗ್ ಮಾಡುತ್ತಿದ್ದನು. ಇನ್ನು ಪ್ರಯೋಗಾಲಯದಕ್ಕೆ ಇರಬೇಕಿದ್ದ ಸಾಮಾನ್ಯ ನಿಯಮಾವಳಿಗಳನ್ನು (ಎಸ್‌ಒಪಿ) ಪಾಲಿಸಲಾಗಿದೆಯೇ ಎಂಬ ಅನುಮಾನಗಳಿವೆ. ಆದ್ದರಿಂದ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.