vuukle one pixel image

ಚಿಕ್ಕಮಗಳೂರು: ಹೆಣ ಹೂಳುವ ವಿಚಾರಕ್ಕೆ ಒಕ್ಕಲಿಗರು - ದಲಿತರ ನಡುವೆ ಗಲಾಟೆ

Girish Goudar  | Updated: Dec 7, 2024, 11:46 AM IST

ಚಿಕ್ಕಮಗಳೂರು(ಡಿ.07): ಕಾಫಿನಾಡಲ್ಲಿ ಒಕ್ಕಲಿಗರು ವರ್ಸಸ್ ದಲಿತರ ಮಧ್ಯೆ ಗಲಾಟೆ ನಡೆದಿದೆ. ಹೆಣ ಹೂಳುವ ವಿಚಾರಕ್ಕೆ ಇಬ್ಬರ ಮಧ್ಯ ಗಲಾಟೆ ನಡೆದಿದ್ದು, ಶವ ಹೂಳುವ ಗುಂಡಿಗೆ ಇಳಿದು ಒಕ್ಕಲಿಗ ಮಹಿಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಒಕ್ಕಲಿಗರ ಸಮುದಾಯ ಭವನ, ದಲಿತರ ಮಧ್ಯೆ ಸ್ಮಶಾನದ ಜಾಗದ ವಿವಾದ ಇದೆ. ಹಲವು ದಶಕಗಳಿಂದ ಜಾಗದ ವಿವಾದ ಬೂದಿ ಮುಚ್ಚಿದ ಕೆಂಡದಂತಿತ್ತು. ಇಂದು ವಿವಾದಿತ ಜಾಗ ನಮ್ಮದೆಂದು ಶವ ಹೂಳಲು ದಲಿತರು ಹೋಗಿದ್ದರು. ಹೀಗಾಗಿ ಒಕ್ಕಲಿಗರ ಸಮುದಾಯ ಇದಕ್ಕೆ ತೀವ್ರ‌ ವಿರೋಧ ವ್ಯಕ್ತಪಡಿಸಿದೆ. 

ಭಾರತ ಗಡಿ ಮುಚ್ಚಿದರೆ ಪತನವಾಗೋದೇಕೆ ಬಾಂಗ್ಲಾ: ಮೌನವಾಗಿದ್ದ ಶೇಖ್ ಹಸೀನಾ ಸಿಡಿದೇಳೋಕೆ ಕಾರಣ ಯಾರು?

ವಿವಾದಿತ ಜಾಗ ನ್ಯಾಯಾಲಯದಲ್ಲಿ ಇದೆ ಎಂದು ಒಕ್ಕಲಿಗರ ವಾದಿಸಿದ್ದಾರೆ. ಗುಂಡಿಗೆ ಇಳಿದ ಒಕ್ಕಲಿಗ ಮಹಿಳೆ ಶವ ಹೂಳಲು ಬಿಟ್ಟಿಲ್ಲ. ಇದಕ್ಕೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪೂರ್ಣಿಮಾ ಶ್ರೀನಿವಾಸ್ ವಿರೋಧ ವ್ಯಕ್ತಪಡಿಸಿದ್ದಾರೆ. ಮೂರ್ನಾಲ್ಕು ಮಹಿಳೆಯರು ಗುಂಡಿಯೊಳಗೆ ಇಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ವೇಳೆ ಆಲ್ದೂರು ಪೊಲೀಸರು ಎಲ್ಲರನ್ನು ಎಳೆದು ಮೇಲೆ ಹಾಕಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾನವಾಗಿತ್ತು. ಹೀಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.