Sep 5, 2021, 6:50 PM IST
ಬೀದರ್, (ಸೆ.05): ಬೀದರ್ ತಾಲೂಕಿನ ಕೊಳಾರ ಬಿ ಗ್ರಾಮದ ಸರ್ವೆ ನಂ. 23ರಲ್ಲಿ ಇರುವ 45 ಎಕರೆ ಜಾಗ ರೈತರ ಜಾನುವಾರುಗಳಿಗೆ ಮೇಯಿಸಲೆಂದು ಮೀಸಲಾಗಿತ್ತು. ಆದರೆ ಈ ಗೋಮಾಳ ಜಾಗದಲ್ಲಿ ಈಗ ಹೊಸ ಜೈಲು ಕಟ್ಟಲಾಗುತ್ತಿದೆ. ಜೈಲಿನ ಕೌಂಪೌಂಡ್ ನಿರ್ಮಾಣದಿಂದ ರೈತರು ತಮ್ಮ ತಮ್ಮ ಹೊಲ, ಗದ್ದೆಗಳಿಗೆ ಹೋಗಲು ಸರಿಯಾದ ರಸ್ತೆ ಇಲ್ಲದೆ ಪರದಾಡುವಂತಾಗಿದೆ.
ಗಣೇಶ ಹಬ್ಬಕ್ಕೆ ಷರತ್ತುಬದ್ಧ ಅನುಮತಿ, ವರ್ಮಾ ಕಪಾಳಕ್ಕೆ ಹೊಡೆದ ನಟಿ; ಸೆ.4ರ ಟಾಪ್ 10 ಸುದ್ದಿ!
ರೈತರಿಗೆ ಮೀಸಲಿರುವ ಗೋಮಾಳ ಜಾಗದಲ್ಲಿ ಸೆಂಟ್ರಲ್ ಜೈಲು ನಿರ್ಮಾಣ ಮಾಡುತ್ತಿರೋದರಿಂದ ಕೋಳಾರ ಬಿ ಗ್ರಾಮದ ಎಷ್ಟೋ ರೈತರು ಇರುವ ಕುರಿ-ಮೇಕೆ, ಎಮ್ಮೆ-ಆಕಳುಗಳನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಜಾನುವಾರುಗಳಿಗೆ ಮೇಯಿಸಲು ಜಾಗ ಇಲ್ಲದೇ ಹೋದರೆ ಜಾನುವಾರುಗಳನ್ನ ಇಟ್ಟುಕೊಂಡು ಏನೂ ಮಾಡೋದು ಅಂತಾ ಮಾರಾಟ ಮಾಡುತ್ತಿದ್ದಾರೆ.