ಕರ್ನಾಟಕ ಬಂದ್/ ರೈತರ ಪ್ರತಿಭಟನೆ ಬಗ್ಗೆ ಮಾತನಾಡಿದ ನಟ, ಸ್ವಯಂ ಕೃಷಿಕ ಕಿಶೋರ್/ ಯರು ಬೇಕಾದರೂ ಜಮೀನು ತೆಗೆದುಕೊಳ್ಳಬಹುದು ಎಂಬ ನೀತಿ ಸರಿ ಇಲ್ಲ/ ನಾವೆಲ್ಲರೂ ಬಂಡವಾಳಶಾಹಿಗಳ ಹಿಡಿತದಲ್ಲಿ ಇದ್ದೇವೆ
ಬೆಂಗಳೂರು(ಸೆ. 28) ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ಕರ್ನಾಟಕ ಬಂದ್ ಗೆ ರೈತ ಸಂಘಟನೆಗಳು ಕರೆ ನೀಡಿದ್ದವು. ನಟ ಕಿಶೋರ್ ಸಹ ರೈತರ ಪರವಾಗಿ ಮಾತನಾಡಿದ್ದಾರೆ.
'ಈಗ ಊಳುವವನೆ ಒಡೆಯ, ಮುಂದೆ ಉಳ್ಳವನೆ ಒಡೆಯ'
ಸ್ವಯಂ ಕೃಷಿಕರಾಗಿರುವ ಕಿಶೋರ್, ಬೆಂಕಿ ಇಲ್ಲದೆ ಹೊಗೆಯಾಡಲ್ಲ, ರೈತರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ಅರ್ಥವಿದೆ. ನಾವೆಲ್ಲರೂ ತಜ್ಞರಾಗಿಬಿಟ್ಟಿದ್ದೇವೆ. ಬದಲಾವಣೆ ಬರಲೇಬೇಕು.. ಜನಗಳ ಒಮ್ಮತವಿಲ್ಲದೆ ಯಾವುದೆ ಕಾಯಿದೆ ತರಬಾರದು ಎಂದು ಹೇಳಿದ್ದಾರೆ.