Aug 13, 2019, 5:01 PM IST
ಬಳ್ಳಾರಿ, (ಆ.13): ಮಹಾರಾಷ್ಟ್ರದ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಉತ್ತರ ಕರ್ನಾಟಕದ ಜನರು ಪ್ರವಾಹದಲ್ಲಿ ಸಿಲುಕಿ ಸಮಸ್ಯೆ ಎದುರಿಸುತ್ತಿದ್ದಾರೆ. ಮತ್ತೊಂದೆಡೆ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ಜೀವನಾಡಿ ತುಂಗಭದ್ರಾಕ್ಕೆ ಒಳ ಹರಿವು ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ನದಿಗೆ ಹರಿಬಿಡಲಾಗಿದ್ದು, ನದಿ ಪಾತ್ರ ಹಳ್ಳಿಗಳು ಜಲಾವೃತವಾಗಿವೆ. ಇದ್ರಿಂದ ಮನೆ-ಮಠ ಕಳೆದುಕೊಂಡ ಜನರು ಪರದಾಡುತ್ತಿದ್ದಾರೆ. ಇದರ ಮಧ್ಯೆ ತುಂಗಭದ್ರಾ ಡ್ಯಾಂ ಒಡೆದಿದೆ ಎಂಬ ಸುದ್ದಿ ಹಬ್ಬಿದೆ. ಅಷ್ಟಕ್ಕೂ ಆಗಿದ್ದೇನು..? ಇದರ ಸತ್ಯಾಸತ್ಯತೆ ಏನು..? ವಿಡಿಯೋನಲ್ಲಿ ನೋಡಿ.