Chikkamagaluru: ನಿವೇಶನ ಖರೀದಿಸಿ ಸಂಕಷ್ಟದಲ್ಲಿ ಸಿಲುಕಿದ ನಿವೃತ್ತ ಯೋಧ

Chikkamagaluru: ನಿವೇಶನ ಖರೀದಿಸಿ ಸಂಕಷ್ಟದಲ್ಲಿ ಸಿಲುಕಿದ ನಿವೃತ್ತ ಯೋಧ

Suvarna News   | Asianet News
Published : Jan 24, 2022, 12:31 PM IST

*  ನಿವೃತ್ತ ಯೋಧನಿಗೆ ನಿವೇಶನ ವಿಚಾರದಲ್ಲಿ ವಂಚನೆ
*  ಅತ್ತ ಹಣವೂ ಇಲ್ಲ ಇತ್ತ ನಿವೇಶನವೂ ಇಲ್ಲ ಎನ್ನುವ ಪರಿಸ್ಥಿತಿ
*  ನಗರಸಭೆ ಜಾಗ ಎಂದು ಕಂದಾಯ ಜಾಗ ಮಾರಿ ವಂಚನೆ
 

ಚಿಕ್ಕಮಗಳೂರು(ಜ.24):  ಚಿಕ್ಕಮಗಳೂರು ಜಿಲ್ಲೆಯ ದಂಟರಮಕ್ಕಿ ನಿವಾಸಿಯಾದ ಪ್ರಸನ್ನ ಎಂಬುವರು ಕಳೆದ ಮೂರು ವರ್ಷದ ಹಿಂದಷ್ಟೇ ಮಿಲಿಟರಿಯಿಂದ ನಿವೃತ್ತಿಯಾಗಿ ಜಿಲ್ಲೆಗೆ ಆಗಮಿಸಿದ್ದಾರೆ. ದೇಶ ಸೇವೆಯಲ್ಲಿ ತೊಡಗಿದ್ದ ಸಮಯದಲ್ಲಿ ಹುಟ್ಟೂರಿನಲ್ಲಿ ಮನೆಯೊಂದನ್ನು ಕಟ್ಟುವ ಆಸೆಯಿಂದ ನಿವೇಶನವೊಂದನ್ನು ಖರೀದಿ ಮಾಡಿದ್ದರು. ಅದೇ ನಿವೇಶನ ಇವರ ಬದುಕಿಗೆ ಈಗ ಮುಳ್ಳಾಗಿ ಪರಿಣಮಿಸಿದೆ. 1987ರಲ್ಲಿ ದಂಟರಮಕ್ಕಿ ಹತ್ತಿರ ಸರ್ವೆ ನಂಬರ್ 145ರಲ್ಲಿ ನಿವೇಶನವೊಂದನ್ನು ಖರೀದಿ ಮಾಡಿದ್ದರು, ಇದನ್ನು ಮಾರಾಟ ಮಾಡಿರುವವರು ಪ್ರಸನ್ನ ಅವರಿಗೆ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

ನಗರಸಭೆಯ ಅಸೆಸ್ಮೆಂಟ್ ನಂಬರ್ ಹಾಕಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಆಸ್ತಿಯನ್ನು ನೋಂದಣಿ ಮಾಡಿಕೊಡಲಾಗಿದೆ. ಆದರೆ ಮನೆ ಕಟ್ಟಲು ಮುಂದಾದ ಪ್ರಸನ್ನ ಅವರಿಗೆ ನಗರಸಭೆಯಲ್ಲಿ ಖಾತೆ ಇಲ್ಲದಿರುವುದನ್ನು ಖಚಿತವಾದ ಮೇಲೆ ಇವರಿಗೆ ದಿಗ್ಬ್ರಮೆ ಉಂಟಾಗಿದೆ. ಸಬ್ ರಿಜಿಸ್ಟರ್ ಕಚೇರಿಯಲ್ಲಿ ನಗರಸಭೆಯ ಅಸೆಸ್ಬೆಂಟ್ ನಂಬರನ್ನು ನಮೂದಿಸಿ ಸೈಟನ್ನು ಮಾರಾಟ ಮಾಡಲಾಗಿದೆ. ಅಲ್ಲದೆ ಸರ್ವೆ ನಂಬರ್ 145ರ ಪಹಣಿಯಲ್ಲೂ ಕೂಡ ಇವರ ಹೆಸರು ಬರುವ ಬದಲು ಬೇರೆಯವರ ಹೆಸರು ಬರುತ್ತಿದೆ. ನಗರಸಭೆಯ ಖಾತೆ ಬದಲಾಗಿ ಕಂದಾಯ ಜಾಗವೆಂದು ಖಾತೆಯಲ್ಲಿ ತೋರಿಸುತ್ತಿದೆ. ನಗರಸಭೆಯ ಜಾಗವೆಂದು ಲಕ್ಷಾಂತರ ಹಣ ಖರ್ಚುಮಾಡಿ ಪ್ರಸನ್ನ ಜಾಗವನ್ನು ಖರೀದಿ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೈಟು ಮಾರಾಟ ಮಾಡಿರುವವರು ಎಲ್ಲಾ ದಾಖಲಾತಿಗಳು ಕೂಡ ಸರಿಯಾಗಿದೆ, ಅದು ಕಂದಾಯ ಜಾಗವೇ ಇದನ್ನು ನಗರಸಭೆಯಲ್ಲಿ ಖಾತೆ ಮಾಡಿಸಿಕೊಳ್ಳುವ ಜವಾಬ್ದಾರಿ ಅವರದ್ದು ಇದಕ್ಕೆ ನಾನು ಹೊಣೆಯಲ್ಲ ಉತ್ತರವನ್ನು ನೀಡುತ್ತಿದ್ದಾರೆ.

Covid 19 Guidelines: ಜ. 27ಕ್ಕೆ ಸಿಎಂ ನೇತೃತ್ವದಲ್ಲಿ ಸಂಪುಟ ಸಭೆ: ‌ಕೋವಿಡ್ ರೂಲ್ಸ್‌ನಿಂದ ಮತ್ತಷ್ಟು ರಿಲೀಫ್?

ದೇಶ ಕಾಯುವ ಯೋಧ ಸೈಟು ಖರೀದಿ ಮಾಡಿ ಕಚೇರಿಗಳನ್ನು ಅಲೆದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿವೇಶನ ಖರೀದಿ ಮಾಡುವ ವೇಳೆಯಲ್ಲಿ ನಗರಸಭೆ ಜಾಗವೆಂದು ಹೇಳಿ ವಂಚನೆ ಮಾಡಿರುವ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಒಟ್ಟಾರೆ ಸೈಟು ಖರೀದಿ ಮಾಡಿರುವ ಪ್ರಸನ್ನ ಹಣವೂ ಇಲ್ಲ ,ಸೈಟು ಇಲ್ಲ ಎನ್ನುವ ಸ್ಥಿತಿಯಲ್ಲಿ ದಿನಕಳೆಯುತ್ತಿದ್ದಾರೆ.
 

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more