Aug 19, 2020, 5:11 PM IST
ಗದಗ (ಆ. 19): ಮಲಪ್ರಭಾ ನದಿ ಪ್ರವಾಹದಲ್ಲಿ ಶ್ವಾನವೊಂದು ಸಿಲುಕಿದ್ದು, ಕೊನೆಗೆ ಅದೇ ಈಜಿಕೊಂಡು ಬಂದು ದಡ ಸೇರಿದೆ. ನರಗುಂದ ತಾಲೂಕಿನ ಸೇತುವೆಯೊಂದರ ಬಳಿ ಈ ಘಟನೆ ನಡೆದಿದೆ.
ಗದಗದಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು ಮಲಪ್ರಭೆ ತುಂಬಿ ಹರಿಯುತ್ತಿದ್ದಾಳೆ. ಜನ, ಜಾನುವಾರು, ಶ್ವಾನಗಳಿಗೆ ಪ್ರವಾಹ ಭೀತಿ ಶುರುವಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಬೆಳೆ ನಾಶವೂ ಆಗಿದೆ. ಶ್ವಾನ ಈಜಿ ದಡ ಸೇರಿರುವ ದೃಶ್ಯ ಇಲ್ಲಿದೆ ನೋಡಿ..!