
ಮಂಗಳೂರು (ಆ.9): ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆಯಲ್ಲಿ ಹೊಸ ತಿರುವುಗಳು ಕಾಣಿಸಿಕೊಂಡಿವೆ. ಅನಾಮಧೇಯ ದೂರುದಾರರ ಇದುವರೆಗೆ ಗುರುತು ಮಾಡಿದ್ದ 13 ಸ್ಥಳಗಳನ್ನು ಬಿಟ್ಟು, ಈಗ ಹೊಸ ಪ್ರದೇಶಗಳಾದ ಕಲ್ಲೇರಿ ಮತ್ತು ಬೊಳಿಯಾರ್ ಅರಣ್ಯಗಳಲ್ಲಿ ಶವಗಳಿಗಾಗಿ ಶೋಧ ಕಾರ್ಯವನ್ನು ಆರಂಭಿಸಿದೆ. ಈ ದಿಢೀರ್ ಬದಲಾವಣೆ ತನಿಖೆಯ ಕುತೂಹಲವನ್ನು ಹೆಚ್ಚಿಸಿದೆ.
ಎಸ್‌ಐಟಿ ಅಧಿಕಾರಿಗಳು ಬೊಳಿಯಾರ್ ಅರಣ್ಯದಲ್ಲಿ ಹೂತಿಟ್ಟ ಶವಗಳ ರಹಸ್ಯ ಬೇಧಿಸಲು ಯತ್ನಿಸುತ್ತಿದ್ದಾರೆ. ದೂರುದಾರರ ಸಾಕ್ಷಿಯಾಗಿ ತಂದಿದ್ದ ಬುರುಡೆ ಮತ್ತು ಈ ಹೊಸ ಶೋಧಗಳ ನಡುವೆ ಇರುವ ನಂಟಿನ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.
ಈ ಕಾಡಿನಲ್ಲೇ ಈ ಬುರುಡೆಯನ್ನು ತೆಗೆದು ತಂದಿದ್ದಾನೆಯೇ ಎಂಬ ಅನುಮಾನ ಮೂಡಿದೆ. ಹಳೆ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ. ಸತ್ಯಶೋಧನೆ ಯಾವ ದಿಕ್ಕಿನಲ್ಲಿ ಸಾಗಲಿದೆ ಮತ್ತು ಅಂತಿಮವಾಗಿ ಈ ನಿಗೂಢತೆಗಳಿಗೆ ಉತ್ತರ ಸಿಗುತ್ತದೆಯೇ ಎಂದು ಎಲ್ಲರೂ ಕಾದು ನೋಡುತ್ತಿದ್ದಾರೆ.