Big 3 Davanagere Agriculture Story: ದಾವಣಗೆರೆ ತಾಲ್ಲೂಕಿನ ಶಿರಾಗನಹಳ್ಳಿ, ಕನಗೊಂಡನಹಳ್ಳೀ, ಬಲ್ಲೂರು, ವಡೇರಹಳ್ಳಿ, ಮುದಹದಡಿ, ಬಟ್ಲಕಟ್ಟೆ, ಜರೇಕಟ್ಟೆ, ಜಡಗನಹಳ್ಳಿ, ಗ್ರಾಮಗಳ 500ಕ್ಕೂ ಹೆಚ್ಚು ರೈತರು ಜಲಾಶಯದ ಹಿನ್ನೀರಿನಲ್ಲಿ ಭತ್ತದ ಬೆಳೆ ಮುಳುಗಡೆಯಾಗಿವೆ
ದಾವಣಗೆರೆ (ಸೆ. 12): ಜಲಾಶಯದ ಮೇಲೆ ನಿಂತು ನೋಡಿದ್ರೆ ಎಲ್ಲೆಲ್ಲೂ ನೀರು ಕಾಣುತ್ತಿದೆ. ಆದ್ರೆ, ಜಲಾಶಯದ ನೀರು ಎಷ್ಟೋ ರೈತರ ಬದುಕನ್ನು ಕಿತ್ತುಕೊಳ್ಳುತ್ತಿದೆ. ದೇವರಬೆಳಕೆರೆ ಪಿಕಪ್ ಹಿನ್ನೀರಿನಲ್ಲಿ ಬರುವ 13 ಹಳ್ಳಿಗಳ 500 ಕ್ಕೂ ಹೆಚ್ಚು ರೈತರು ತಮ್ಮ ಭತ್ತದ ಗದ್ದೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಜಲಾಶಯದ ಹಿನ್ನೀರು ಜಾಸ್ತಿಯಾಗಿ ರೈತರು ಹೇಳುವ ಪ್ರಕಾರ 4 ಸಾವಿರ ಎಕರೆ ಭತ್ತ ಮುಳುಗಡೆಯಾಗಿದೆ. ಈ ದೃಶ್ಯ ಕಂಡು ಬಂದಿದ್ದು ದಾವಣಗೆರೆ (Davanagere) ಹರಿಹರ ತಾಲ್ಲೂಕಿನ ಸಂಕ್ಲೀಪುರ ಗುಳ್ಳದ ಹಳ್ಳಿ ಬೂದಿಹಾಳ್ ದೇವರಬೆಳಕೆರೆಯಲ್ಲಿ. ದಾವಣಗೆರೆ ತಾಲ್ಲೂಕಿನ ಶಿರಾಗನಹಳ್ಳಿ, ಕನಗೊಂಡನಹಳ್ಳೀ, ಬಲ್ಲೂರು ವಡೇರಹಳ್ಳಿ, ಮುದಹದಡಿ ಬಟ್ಲಕಟ್ಟೆ, ಜರೇಕಟ್ಟೆ ಜಡಗನಹಳ್ಳಿ , ಗ್ರಾಮಗಳ 500ಕ್ಕೂ ಹೆಚ್ಚು ರೈತರು ಜಲಾಶಯದ ಹಿನ್ನೀರಿನಲ್ಲಿ ಭತ್ತದ ಬೆಳೆ ಮುಳುಗಡೆಯಾಗಿವೆ.
ಜಲಾಶಯದ ಹಿನ್ನೀರಿನಲ್ಲಿ 4 ಸಾವಿರ ಎಕರೆ ಭತ್ತ ಬೆಳೆ ಮುಳುಗಡೆಯಾಗಲು ಕ್ರೈಸ್ಟ್ ಗೇಟ್ಗಳಲ್ಲಿ ಕಟ್ಟಿಕೊಂಡಿರುವ ಕಸ ಕಾರಣ. ಒಟ್ಟು 14 ಗೇಟ್ಗಳಿದ್ದು ಅದರಲ್ಲಿ ನಾಲ್ಕು ಗೇಟ್ಗಳಲ್ಲಿ ಕಟ್ಟಿಕೊಂಡಿರುವ ಕಸ ತೆಗೆಯಲಾಗಿದ್ದು ಉಳಿದ 10 ಗೇಟ್ಗಳಲ್ಲಿ ನೀರಿನಲ್ಲಿ ಬೆಳೆಯುವ ಜೊಂಡು ಕಳೆ ಹಾಗೇ ಇದೆ.
BIG 3: ಕೋಟಿ ಕೋಟಿ ಹಣದಲ್ಲಿ ಕಟ್ಟಿದ ಆಸ್ಪತ್ರೆಯಲ್ಲಿಲ್ಲ ಶವಾಗಾರ: ಸುರಪುರದ ಕೆಂಭಾವಿಯ ನರಕಯಾತನೆ
ಜಲಾಶಯದ ಹೆಚ್ಚುವರಿ ನೀರು ಹೊರಗೆ ಹರಿದು ಹೋಗಲು ಇದು ಅಡ್ಡಿ ಆಗಿ ನಿಂತಿದೆ. ಇದರಿಂದ ಯಥೇಚ್ಛವಾಗಿ ಸುರಿಯುತ್ತಿರುವ ಮಳೆ ನೀರು ಜಲಾಶಯದಲ್ಲಿ ಹೆಚ್ಚಾಗಿ ರೈತರ ಜಮೀನು ಮುಳುಗಡೆಯಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿ ಮೂರು ಬಾರಿ ಬೆಳೆ ಮುಳುಗಡೆಯಾಗಿದ್ದು ರೈತರು ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ .
ಏಷ್ಯಾನೆಟ್ ಸುವರ್ಣನ್ಯೂಸ್ ಬಿಗ್3 (Big 3) ಇದಕ್ಕೆ ಒಂದೇ ಪರಿಹಾರ ಎಂದು ಆ ಭಾಗದ ರೈತರು ನಂಬಿಕೆ ಇಟ್ಟು ಮನವಿ ಮಾಡಿದ್ದಾರೆ. ವರದಿ ಪ್ರಸಾರ ಆದ್ಮೇಲಾದ್ರೂ ಈ ಸಮಸ್ಯೆ ಬಗೆ ಹರಿಸ್ತಾರಾ ಅಂತ ನೋಡೋಣ