ಕುರ್‌ಕುರೇಗಾಗಿ 2 ಕುಟುಂಬಗಳ ನಡುವೆ ಮಾರಾಮಾರಿ, 10 ಮಂದಿ ಆಸ್ಪತ್ರೆಗೆ, ಊರು ಬಿಟ್ಟ 25 ಜನ!

Dec 23, 2024, 10:29 PM IST

ಕುರ್‌ಕುರೇ ವಿಚಾರಕ್ಕೆ 2 ಕುಟುಂಬಗಳ ನಡುವೆ ಮಾರಾಮಾರಿ ನಡೆದು 10 ಜನ ಆಸ್ಪತ್ರೆಗೆ ದಾಖಲಾಗಿ, 25 ಮಂದಿ ಊರು ಬಿಟ್ಟ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಹೊನ್ನೇಬಾಗಿಯ ಅತೀಫ್ ಉಲ್ಲಾ ಫ್ಯಾಮಿಲಿ ಹಾಗೂ ಸದ್ದಾಂ ಎಂಬ ಫ್ಯಾಮಿಲಿ ನಡುವೆ ಮಾರಾಮಾರಿಯಾಗಿದ್ದು, ಅತೀಪ್‌ ಉಲ್ಲಾ ಅದೇ ಗ್ರಾಮದಲ್ಲಿ ಸಣ್ಣದೊಂದು ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು.ಅತೀಫ್‌ ಉಲ್ಲಾ ಅಂಗಡಿಯಲ್ಲಿ ಸದ್ದಾಂ ಕುಟುಂಬದ ಮಕ್ಕಳು ಕುರ್‌ಕುರೇ ಖರೀದಿ ಮಾಡಿದ್ದರು. ಎಕ್ಸಪರಿಯಾದ ಕುರ್‌ಕುರೇ ಮಾರಾಟ ಮಾಡಿದ್ದೀಯಾ ಬೇರೆಯದ್ದು ಕೊಡು ಅಂತ ಕೇಳಿದ್ದಕ್ಕೆ ಎರಡು ಕುಟುಂಬಸ್ಥರ ನಡುವೆ  ಜಗಳ ನಡೆದಿದೆ. ಈ ಸಮಯದಲ್ಲಿ ಅತೀಫ್ ಹಾಗೂ ಸದ್ದಾಂ ಕುಟುಂಬಸ್ಥರು ನಡುವೆ ಮಾತಿನ ಚಕಮಕಿ ಮೀತಿ ಮೀರಿ ಎರಡು ಕುಟುಂಬದ ಸದಸ್ಯರು ಪರಸ್ಪರ ಕೈ ಕೈ ಮೀಲಾಯಿಸಿ ಹೊಡೆದಾಡಿಕೊಂಡಿದ್ದಾರೆ.

ಸದ್ದಾಂ ಕುಟುಂಬ ರಸ್ತೆ ಬದಿ ಹೋಟೆಲ್‌ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ವಾಗ್ವಾದ ಮತ್ತು ಗಲಾಟೆ ಹಿನ್ನೆಲೆ ಅತೀಫ್‌ ವಿರುದ್ಧ ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ ಸದ್ದಾಂ ದೂರು ನೀಡಿದ್ದಾರೆ. ಅದೇ ದ್ವೇಷ ಇಟ್ಟುಕೊಂಡು ಅತೀಫ್ ಪರವಾಗಿದ್ದ 30ಕ್ಕೂ ಹೆಚ್ವು ಜನ ಸದ್ದಾಂ ಕುಟುಂಬಸ್ಥರ‌ ಮೇಲೆ‌ ಹಲ್ಲೆ ಮಾಡಿ ಹೋಟೆಲ್ ಧ್ವಂಸ ಮಾಡಿದ್ದಾರೆಂದು ಆರೋಪಿಸಲಾಗಿದೆ.