ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದ್ದು, ಚಿತ್ರಮಂದಿರದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಥಳಿಸಲಾಗಿದೆ.
ಸುಳ್ಯದ ಚಿತ್ರಮಂದಿರದಲ್ಲಿ ಕಾಂತಾರ ಸಿನಿಮಾ ನೋಡಲು ಬಂದಿದ್ದ ಇಬ್ಬರು ವಿದ್ಯಾರ್ಥಿಗಳಿಗೆ, ತಂಡವೊಂದು ಥಳಿಸಿರುವ ಘಟನೆ ನಡೆದಿದೆ. ಮೊಹಮ್ಮದ್ ಇಮ್ತಿಯಾಜ್ ಹಾಗೂ ಆತನ ಗೆಳತಿಗೆ ಮುಸ್ಲಿಂ ಯುವಕರ ತಂಡ ಹಲ್ಲೆ ಮಾಡಿದ್ದು, ಕಾಲೇಜಿಗೆ ಹೋಗದೆ ಸಿನಿಮಾಗೆ ಬಂದಿದ್ದರಿಂದ ಹಲ್ಲೆ ಮಾಡಲಾಗಿದೆ. ಚಿತ್ರಮಂದಿರದ ಬಳಿ ಇಬ್ಬರ ಮೇಲೆ ದಾಳಿ ನಡೆದಿದೆ.