Mangaluru: ಕಾರಿಂಜೇಶ್ವರ ದೇವಾಲಯದ ತಪ್ಪಲಿನಲ್ಲಿ ಕಲ್ಲುಗಣಿಗಾರಿಕೆ, ಹಿಂ.ಜಾ.ವೇ ಬೃಹತ್ ಹೋರಾಟ

Nov 20, 2021, 5:51 PM IST

ಮಂಗಳೂರು (ನ. 20): ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಬಂಟ್ವಾಳ (Bantawala) ತಾಲೂಕಿನ ವಗ್ಗ ಗ್ರಾಮದಲ್ಲಿ ಬರುವ ಪುಣ್ಯಕ್ಷೇತ್ರ ಕಾರಿಂಜೇಶ್ವರ ದೇವಸ್ಥಾನ (Karinjeshwara Temple). ಪೌರಾಣಿಕ ಶಿವ ಕ್ಷೇತ್ರಕ್ಕೆ ತನ್ನದೆ ಆದ ಐತಿಹ್ಯವಿದ್ದು, ದೇವಸ್ಥಾನಕ್ಕೆ ತೆರಳಲು ಬರೊಬ್ಬರಿ 355 ಮೆಟ್ಟಿಲು ಹತ್ತಿ ಬಳಿಕ ಶಿವ ದರ್ಶನ ಮಾಡಬೇಕು. 

Yakshagana : 2 ವರ್ಷಗಳ ಬಳಿಕ ಯಕ್ಷಗಾನ ಮೇಳಗಳ ತಿರುಗಾಟ ಆರಂಭ

 ಕರಾವಳಿ ಭಾಗದಲ್ಲಿ ಈ ದೇವಸ್ಥಾನಕ್ಕೆ ವಿಶೇಷ ಮನ್ನಣೆಯಿದ್ದು ಆಟಿ ಮಾಸದಲ್ಲಿ ಇಲ್ಲಿಗೆ ಬಂದು ಪುಣ್ಯಸ್ನಾನ ಮಾಡಿ ಆಟಿ ಅಮವಾಸ್ಯೆ ಕಷಾಯ ಕುಡಿಯೋದು ವಾಡಿಕೆಯಾಗಿದೆ. ಇನ್ನು ಇಂತಹ ಕ್ಷೇತ್ರದ ತಪ್ಪಲಿನಲ್ಲಿ ಅಕ್ರಮ ಗಣಿಗಾರಿಕೆ (Illegal mining) ನಡೆಯುತ್ತಿದ್ದು ಇದು ಕ್ಷೇತ್ರದಲ್ಲಿರೊ ದೇವಸ್ಥಾನಕ್ಕೆ ಧಕ್ಕೆ ತರುತ್ತಿದೆ ಅನ್ನೊ ಆರೋಪ ಕೇಳಿ ಬಂದಿದೆ.  ಈ ದೇವಸ್ಥಾನದ ಬುಡದಲ್ಲೇ ಭಾರೀ ಪ್ರಮಾಣದ ಸ್ಟೋಟಕ ಸಂಗ್ರಹ ಮಾಡಲಾಗಿದ್ದು, ಪೌರಾಣಿಕ ಶಿವ ಕ್ಷೇತ್ರದ ಬುಡದಲ್ಲೇ ಡೈನಾಮೆಟ್ ಇಟ್ಟು ಬಂಡೆ ಸ್ಟೋಟಿಸುತ್ತಾ ಇದ್ದಾರೆ. ಇದರ ಹಿಂದೆ ರಾಜಕೀಯ ಪ್ರಭಾವಿಗಳಿದ್ದಾರೆ ಎನ್ನಲಾಗುತ್ತಿದೆ. ಇದೇ ತಿಂಗಳು 21 ರಂದು ಕಾಲ್ನಡಿಗೆಯ ಮೂಲಕ ಭವ್ಯ ಶೋಭಾ ಯಾತ್ರೆ ಮಾಡಲಾಗುತ್ತೆ ಅಂತಾ ಹಿಂದು ಜಾಗರಣ ವೇದಿಕೆ ಹೇಳಿದೆ.