Oct 22, 2023, 1:22 PM IST
ದಕ್ಷಿಣ ಕನ್ನಡ (ಅ.22): ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮುಚ್ಚಿ ಒಂದೂವರೆ ದಶಕ ಕಳೆದ ನಂತರ ಗುಜರಿ ವಸ್ತುಗಳಲ್ಲಿ ಕೋಟ್ಯಂತರ ರೂ, ಅಕ್ರಮ ನಡೆದಿದೆ ಎಂಬ ಆರೋಪ ವ್ಯಕ್ತವಾಗಿದೆ. ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬ್ರಹ್ಮಾವರಕ್ಕೆ ಆಗಮಿಸಲಿದ್ದು, ಆಗ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅಕ್ರಮದ ಬಗ್ಗೆ ತನಿಖೆ ಮಾಡುವಂತೆ ಒತ್ತಾಯಿಸಲಿದ್ದಾರೆ.
ಕರಾವಳಿ ಭಾಗದ ಏಕೈಕ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಾಗಿತತು. ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ, ಬ್ರಹ್ಮಾವರ ಇದು ಆರಂಭವಾಗಿದ್ದೇ ಸಹಕಾರಿ ತತ್ವದ ಅಡಿಯಲ್ಲಿ. ಆದರೆ, ಇದು ಮುಚ್ಚಿ ಒಂದೂವರೆ ದಶಕಗಳೇ ಕಳೆದಿವೆ. ಈಗ ಕಾರ್ಖಾನೆಯಲ್ಲಿ ಅಕ್ರಮ ನಡೆದಿರುವ ಆರೋಪ ಈಗ ಕೇಳಿಬಂದಿದೆ. ಅಸಮರ್ಪಕ ನಿರ್ವಹಣೆ ಕಾರಣದಿಂದಾಗಿ ಈ ಕಾರ್ಖಾನೆಯನ್ನು ಮುಚ್ಚಲಾಗಿದೆ. ಆದರೆ, ಕಾರ್ಖಾನೆಯ ಕಬ್ಬಿಣದ ವಸ್ತುಗಳನ್ನು ಮಾರಾಟ ಮಾಡುವಲ್ಲಿ ಕಳೆದ ಬಿಜೆಪಿ ಸರ್ಕಾರದಿಂದ ಭಾರಿ ದೊಡ್ಡ ಹಗರಣವನ್ನು ಮಾಡಿದ್ದಾರೆ. ಕೋಟಿ ಕೋಟಿ ರೂ. ಹಣವನ್ನು ಲೂಟಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಿಂದಿನ ಬಿಜೆಪಿ ಸರ್ಕಾರದಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿಕೊಂಡು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿನ ಎಲ್ಲ ವಸ್ತುಗಳನ್ನು ಚೆನ್ನೈ ಸಂಸ್ಥೆಗೆ ಮಾರಾಟ ಮಾಡಿದ್ದಾರೆ. ಟೆಂಡರ್ ಕರೆಯುವಾಗ ಹೆಚ್ಚಿನ ಮೊತ್ತಕ್ಕೆ ಗುಜರಿ ವಸ್ತುಗಳ ಮಾರಾಟದ ಬೆಲೆಯನ್ನು ತೆಗೆದುಕೊಂಡು, ವಸ್ತುಗಳನ್ನು ಮಾರಾಟ ಮಾಡಿದ ನಂತರ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ ಎಂದು ರಶೀದಿಯನ್ನು ಸಿದ್ಧಪಡಿಸಿದ್ದಾರೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.