ಲಾಕ್ ಡೌನ್ ಇಲ್ಲವಾದರೆ ಏನಾತು? ಫೀಲ್ಡಿಗಿಳಿದ ಡಿಸಿ ಕಂಡು ಕಾಲ್ಕಿತ್ತವರ ನೋಡಿ!

Jul 22, 2020, 9:26 PM IST

ಉಡುಪಿ (ಜು. 22): ರಾಜ್ಯಾದ್ಯಂತ ಲಾಕ್ಡೌನ್ ತೆರವಾಗಿದೆ. ಉಡುಪಿ ಜಿಲ್ಲೆಯಲ್ಲೂ ಗಡಿ ಸಿಲ್ ಆದೇಶವನ್ನು ವಾಪಸ್ ಪಡೆಯಲಾಗಿದೆ. ಆದೇಶ ವಾಪಾಸು ಪಡೆಯುತ್ತಿದ್ದಂತೆ ಜನರು ಇದರ ಲಾಭ  ಪಡೆಯುತ್ತಿದ್ದಾರೆ. ಕೋವಿಡ್ ಕಾಲದ ಕಠಿಣ ಕಾನೂನುಗಳನ್ನು ಬ್ರೇಕ್ ಮಾಡುತ್ತಿದ್ದಾರೆ. ಇದನ್ನು ಗಮನಿಸಿದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ನಗರದ ಆಯಕಟ್ಟಿನ ಸ್ಥಳಗಳಿಗೆ ಭೇಟಿ ನೀಡಿದರು.

ಈ ವೇಳೆ ಸರ್ವಿಸ್ ಬಸ್ ನಿಲ್ದಾಣಕ್ಕೆ ಜಿಲ್ಲಾಧಿಕಾರಿಗಳು ಎಂಟ್ರಿ ಕೊಡ್ತಿದ್ದಂತೆ ಯುವಕರ ಗುಂಪೊಂದು ಏಕಾಏಕಿ ಕಾಲ್ಕಿತ್ತಿತು. ಒಂದೇ ಸಮನೆ ಕಾರ್‌ನ ಎಕ್ಸಲೇಟರ್ ತಿರುಗಿಸಿ ಸ್ಥಳದಿಂದ ಪಲಾಯನಗೈದ ದೃಶ್ಯ ಕ್ಯಾಮೆರಾಗಳಲ್ಲೂ ಸೆರೆಯಾಗಿದೆ. 

ಅಣ್ಣನ ಆಶೀರ್ವಾದ, ಕೊರೋನಾ ಗೆದ್ದ ಧ್ರುವ ಸರ್ಜಾ

ಯುವಕರ ತಂಡವನ್ನು ಪತ್ತೆ ಮಾಡುವಂತೆ ಜಿಲ್ಲಾಧಿಕಾರಿಗಳು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಅನಿರೀಕ್ಷಿತ ದಾಳಿಯಿಂದ ಕಾರು ಚಾಲಕರು, ಅಂಗಡಿ- ಹೋಟೆಲ್ ಮಾಲೀಕರು, ಸಾರ್ವಜನಿಕರು  ಕಸಿವಿಸಿಗೊಂಡಿದ್ದು ಸುಳ್ಳಲ್ಲ.