ಕ್ಷತ್ರಿಯ ಸಮುದಾಯ ಇಲ್ಲದಿದ್ದರೆ ಒಗ್ಗಟ್ಟು ಇರುತ್ತಿರಲಿಲ್ಲ: ಸಿಎಂ ಬೊಮ್ಮಾಯಿ

Jan 29, 2023, 5:12 PM IST

ಕರ್ನಾಟಕ ಕ್ಷತ್ರಿಯ ಒಕ್ಕೂಟದ ಬೃಹತ್‌ ಸಮಾವೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಬಜೆಟ್‌'ನಲ್ಲಿ ಕ್ಷತ್ರಿಯ ಸಮುದಾಯಕ್ಕೂ ನೆರವು ನೀಡುವುದಾಗಿ ಭರವಸೆ ನೀಡಿದರು. ವೇದಿಕೆ ಮೇಲೆ ಈ ಕುರಿತು ಅವರು ಘೋಷಣೆ ಮಾಡಿದರು. ಕ್ಷತ್ರಿಯ ಸಮುದಾಯ ಇಲ್ಲದಿದ್ದರೆ ಒಗ್ಗಟ್ಟು ಇರುತ್ತಿರಲಿಲ್ಲ. ಸ್ವಾಮಿ ವಿವೇಕಾನಂದರು ಜ್ಞಾನದ ಕತ್ತಿ ಕೊಟ್ಟವರು, ಪಟೇಲರ ಒಂದು ದೇಶದೊಳಗೆ ವಿಲೀನ ಆದವರು ಕ್ಷತ್ರಿಯರು ಎಂದು ಸಿಎಂ ಬೊಮ್ಮಾಯಿ ಹೇಳಿದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಭಾಗಿಯಾಗಿದ್ದರು. ಹಾಗೂ ಜಯ ಚಾಮರಾಜೇಂದ್ರ ಒಡೆಯರ್‌ ಮೊಮ್ಮಗ ಉಪಸ್ಥಿತಿ ಇದ್ದರು.

ಹಸುಗಳೊಂದಿಗೆ ಮಠ ಖಾಲಿ ಮಾಡಿದ ಮುರುಘಾ ಶರಣರ ಆಪ್ತೆ: ಇದರ ಹಿಂದಿನ 'ನಿಗ ...