Karwar: ನೋಡುಗರನ್ನ ಹುಬ್ಬೇರಿಸುವಂತೆ ಮಾಡಿದ ತೆಂಗಿನಮರ..!

Karwar: ನೋಡುಗರನ್ನ ಹುಬ್ಬೇರಿಸುವಂತೆ ಮಾಡಿದ ತೆಂಗಿನಮರ..!

Published : May 17, 2022, 12:18 PM IST

*  ಎರಡ್ಮೂರು ತಿಂಗಳಲ್ಲಿ ಬರೋಬ್ಬರಿ 4000- 5000 ತೆಂಗಿನ ಕಾಯಿ 
*  ಹೊನ್ನಾವರ ತಾಲೂಕಿನ ಹೊಸಕುಳಿ ಗ್ರಾಮದಲ್ಲಿರುವ ಕಲ್ಪವೃಕ್ಷ
*  12 ವರ್ಷಗಳ ಹಿಂದೆ ಬೆಳೆಸಿದಂತಹ ಈ ವಿಶೇಷ ತಳಿಯ ತೆಂಗಿನ ಮರ
 

ಕಾರವಾರ(ಮೇ.17):  ಕಲ್ಪವೃಕ್ಷ ಎಂದೇ ಗುರುತಿಸಲ್ಪಡುವ ತೆಂಗಿನಮರದಲ್ಲಿ ಸಾಮಾನ್ಯವಾಗಿ ನೂರರಿಂದ ಇನ್ನೂರು ಕಾಯಿ ಬಿಡವುದನ್ನು ನೋಡಿದ್ದೇವೆ. ಆದರೆ, ಇಲ್ಲೊಂದು ತೆಂಗಿನಮರ ಮಾತ್ರ ಬರೋಬ್ಬರಿ ನಾಲ್ಕರಿಂದ ಐದು ಸಾವಿರ ಕಾಯಿಗಳನ್ನು ಬಿಟ್ಟು ನೋಡುಗರನ್ನು ಬೆರಗಾಗಿಸುತ್ತಿದೆ. ಇದೇ ಕಾರಣದಿಂದ ಹಲವು ಕೃಷಿ ಪ್ರೇಮಿಗಳು ಈ ತೆಂಗಿನ ಮರವನ್ನು ನೋಡಲು ಆಗಮಿಸುತ್ತಾರಲ್ಲದೇ, ಈ ತಳಿಯ ಗಿಡವನ್ನು ಉಚಿತವಾಗಿ ಕೊಂಡೊಯ್ದು ಬೆಳೆಸುತ್ತಿದ್ದಾರೆ. ಅಷ್ಟಕ್ಕೂ ಈ ವಿಶೇಷ ತೆಂಗಿನಮರ ಇರೋದಾದ್ರೂ ಎಲ್ಲಿ ಅಂತೀರಾ..? ಈ ಸ್ಟೋರಿ ನೋಡಿ... 

ಹೌದು, ಎಲ್ಲಾ ತೆಂಗಿನ ಮರಗಳಿಂದ ಕೊಂಚ ಭಿನ್ನವಾಗಿ ಕಾಣುವ ಈ ಮರದ ಕಾಯಿಗಳಿಂದಾಗುವ ಸಸಿಗಳಿಗೆ ಪ್ರಸ್ತುತ ಎಲ್ಲಿಲ್ಲದ ಬೇಡಿಕೆ. ಈ ಕಲ್ಪವೃಕ್ಷದಲ್ಲಿ ಬೆಳೆಯುವ ಬೆಳೆಯನ್ನು ಎಣಿಸುತ್ತಾ ಹೋದ್ರೆ ಯಾರೂ ಕೂಡಾ ಉಸ್ಸಪ್ಪಾ... ಅನ್ನದಿರಲ್ಲ. ಕಾರಣ ಈ ಮರದಲ್ಲಿ ಬೆಳೆಯುವ ತೆಂಗಿನ ಕಾಯಿಗಳ ಸಂಖ್ಯೆ.‌ ಸಾಮಾನ್ಯವಾಗಿ ಯಾವುದೇ ಉತ್ತಮ ತೆಂಗಿನಮರದಲ್ಲಿ 100, 200 ರಿಂದ 500ರಷ್ಟು ತೆಂಗಿ‌ನಕಾಯಿಗಳು ಬೆಳೆಯೋದು ನೋಡಿದ್ದೇವೆ. ಆದರೆ, ಇಲ್ಲೊಂದು ತೆಂಗಿನಮರದಲ್ಲಿ ಮಾತ್ರ ಬರೋಬ್ಬರಿ 4000ದಿಂದ 5000 ತೆಂಗಿನಕಾಯಿಗಳು ಬೆಳೆಯುತ್ತವೆ. ಅಷ್ಟಕ್ಕೂ ಈ ತೆಂಗಿನ ಮರವಿರೋದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಕುಳಿ ಗ್ರಾಮದಲ್ಲಿ. ಈ ಗ್ರಾಮದ ಹಂಸಾರಾಮಕ್ಕಿ ನಿವಾಸಿ ಸುಬ್ರಾಯ ಪರಮೇಶ್ವರ ಶೆಟ್ಟಿ ಅವರ ಮನೆಯಲ್ಲಿ ಸುಮಾರು 12 ವರ್ಷಗಳ ಹಿಂದೆ ಬೆಳೆಸಿದಂತಹ ಈ ವಿಶೇಷ ತಳಿಯ ತೆಂಗಿನ ಮರದಲ್ಲಿ 3 ವರ್ಷದಲ್ಲೇ ಉತ್ತಮ ಫಸಲು ಪ್ರಾರಂಭವಾಗಿತ್ತು. ಇಂದಿನವರೆಗೂ ಈ ಮರದಲ್ಲಿ ಭರ್ಜರಿಯಾಗಿ ಬೆಳೆ ಬೆಳೆಯುತ್ತಿದ್ದು, ಇದರ ಒಂದೊಂದು ಗೊಂಚಲಿನಲ್ಲೇ 300ರಿಂದ 400ರಷ್ಟು ಕಾಯಿಗಳು ಬೆಳೆಯುತ್ತಿವೆ. ಪ್ರತಿ 2 ತಿಂಗಳಿಗೊಮ್ಮೆ ಇದರ ಬೆಳೆ ಕೊಯ್ಯಲು ತಯಾರಾಗುತ್ತಿದ್ದು, ಮನೆ ಮಾಲಕರಿಗೆ ಭರ್ಜರಿ ಲಾಭ ತಂದು ಕೊಡುತ್ತಿದೆ. 

ಕೊಡಗು: ಬೆಂಕಿಯಿಂದ ಬಾಣಲೆಗೆ ನೆರೆ ಸಂತ್ರಸ್ತರ ಪರಿಸ್ಥಿತಿ..!

ವಿಶೇಷವಾಗಿ ಗುರುತಿದಲ್ಪಟ್ಟಿರುವ ಈ ಮರಕ್ಕೆ ಮಾಲಕರಂತೂ ವಿಶೇಷ ಗೊಬ್ಬರವನ್ನೇನೂ ಹಾಕಿಲ್ಲ. ಈ ಮನೆಯಲ್ಲಿ ದನ ಸಾಕಾಣೆ ಮಾಡುತ್ತಿರುವುದರಿಂದ ಅವುಗಳ ಸಗಣಿ, ಇತರ ಸಾವಯವ ಗೊಬ್ಬರ ಹಾಗೂ ನೀರನ್ನು ಮಾತ್ರ ಈ ಮರಕ್ಕೆ ಹಾಕಲಾಗುತ್ತಿದೆ. ಪ್ರತೀ ವರ್ಷ ಭಾರೀ ಪ್ರಮಾಣದಲ್ಲಿ ಬೆಳೆಗಳನ್ನು ನೀಡುತ್ತಿರುವ ಈ ಮರವನ್ನು ಕಂಡು ಮಾಲಕರು ಕೂಡಾ ಆಶ್ಚರ್ಯಕ್ಕೊಳಗಾಗಿದ್ದರು. ಆದರೆ, ಪ್ರತೀ ವರ್ಷ ಇದೇ ಪ್ರಮಾಣದಲ್ಲಿ ಈ ತೆಂಗಿನಮರ ಬೆಳೆ ನೀಡುತ್ತಿರುವುದರಿಂದ ತೆಂಗಿನಕಾಯಿ ಮಾರಾಟ ಮಾಡಿ, ತೆಂಗಿನ ಎಣ್ಣೆ ಉತ್ಪಾದಿಸಿ ಈ ಮರದ ಮಾಲಕರು ಲಾಭ ಗಳಿಸುತ್ತಿದ್ದಾರೆ. ಈ ಮರದಲ್ಲಿ ಬಿಡುವ ಕಾಯಿ ಅತೀ ರುಚಿಯಾದ ನೀರನ್ನು ಹಾಗೂ ಸಿಹಿ ಕೊಬ್ಬರಿಯನ್ನು ನೀಡುತ್ತಿರುವುದರಿಂದ ಈ ವೃಕ್ಷ ಖಂಡ್ರೆ ಮನೆಯವರಿಗೆ ಅತೀ ಪ್ರೀತಿ ಮತ್ತು ಭಕ್ತಿ. ಈ ವೃಕ್ಷದ ತಳಿ ಯಾವುದೆಂದು ಸದ್ಯಕ್ಕೆ ತಿಳಿದುಬಂದಿಲ್ಲ.‌ 

ಈ ಕಾರಣದಿಂದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಯಾವ ತಳಿಯೆಂದು ತಿಳಿಸುವುದಾಗಿ ಮಾಹಿತಿ ನೀಡಿದ್ದಾರೆ. ಈ ಮರದ ವಿಶೇಷತೆಯ ಮಾಹಿತಿ ಹೊರಕ್ಕೆ ಬೀಳುತ್ತಿದ್ದಂತೇ ಈಗಾಗಲೇ ಹಲವು ಜನರು ಇದೇ ಮರದ ತೆಂಗಿನ ಕಾಯಿಗಳಿಂದ ಬೆಳೆದ ಸಸಿಗಳನ್ನು ಉಚಿತವಾಗಿ ಕೊಂಡೊಯ್ದಿದ್ದಾರೆ. ಅಲ್ಲದೇ, ಸುಮಾರು 500 ಸಸಿಗಳನ್ನು ತಯಾರು ಮಾಡಿ ನೀಡುವಂತೆ ಈ ಮನೆಯವರಿಗೆ ಆರ್ಡರ್ ಕೂಡಾ ಕೆಲವರಿಂದ ದೊರಕಿದೆ. ಇನ್ನು ಈ ಮನೆಯ ಯುವಕ ವಿನಯ್ ಹೇಳುವಂತೆ, ಕೆಲವು ರೈತರು ಯಾವುದ್ಯಾವುದೋ ತಳಿಗಳನ್ನು ಖರೀದಿಸಿ ಉತ್ತಮ ಬೆಳೆ ಪಡೆಯದೇ ನಷ್ಟ ಅನುಭವಿಸುತ್ತಾರೆ. ಅದರ ಬದಲು ಇವರ ಮನೆಯಲ್ಲಿರುವ ಮರದ ತಳಿಯನ್ನು ಕೊಂಡೊಯ್ದಲ್ಲಿ ಉತ್ತಮ ಬೆಳೆಯೊಂದಿಗೆ, ಉತ್ತಮ ಲಾಭ ಪಡೆಯಬಹುದು ಅಂತಾರೆ ಈ ಯುವಕ ಮರದ ಮಾಲೀಕ ವಿನಯ್ ಹಂಸಾರಾಮಕ್ಕಿ.

ಒಟ್ಟಿನಲ್ಲಿ ಅತೀ ವಿಶೇಷವಾಗಿರುವ ಈ ತೆಂಗಿನ ಮರ ಒಂದೆಡೆ ಮನೆಯ ಮಾಲೀಕರಿಗೆ ಉತ್ತಮ ಆದಾಯ ನೀಡುವುದರೊಂದಿಗೆ ಊರಿನ ಜನರಿಗೆ ಆಶ್ಚರ್ಯವನ್ನೂ ಉಂಟು ಮಾಡಿದೆ. ಈ ಮರದ ತಳಿ ರಾಜ್ಯದ ಇತರ ರೈತರಿಗೂ ದೊರೆತಲ್ಲಿ, ರಾಜ್ಯದ ರೈತರು ಕೂಡಾ ತೆಂಗುಗಳನ್ನು ಬೆಳೆಯುವ ಮೂಲಕ ತೋಟಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಅನ್ನೋದು ನಮ್ಮ ಆಶಯ.
 

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
Read more