Chitradurga: ಎರಡ್ಮೂರು ವರ್ಷಗಳಿಂದ ರೈತರಿಗೆ ತಲುಪದ ಬೆಳೆ ವಿಮೆ, ಫಸಲ್ ಭೀಮಾ‌ ಯೋಜನೆ

Mar 4, 2022, 5:08 PM IST

ಚಿತ್ರದುರ್ಗ (ಮಾ. 04):  ರೈತರು ಬೆಳೆದ ಬೆಳೆಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಬೆಳೆ ವಿಮೆ, ಫಸಲ್ ಭೀಮಾ‌ ಯೋಜನೆಗಳನ್ನ‌ ಜಾರಿಗೆ ತಂದಿದೆ. ಆದ್ರೆ ಈ ಯೋಜನೆಯು ಗಡಿಭಾಗದಲ್ಲಿರುವ ಸೊಂಡೆಕೆರೆ  ಗ್ರಾಮದ ರೈತರಿಗೆ ತಲುಪುತ್ತಿಲ್ಲ ಎಂಬ ಆರೋಪ‌ ಕೇಳಿ ಬಂದಿದೆ. 

Chikkamagaluru: ಕಾಡಾನೆ ಹಾವಳಿ ತಡೆಯಲು ರೈತರ ಹೊಸ ಪ್ರಯೋಗ ಸಕ್ಸಸ್..!

 ಕಳೆದ ಎರಡ್ಮೂರು ವರ್ಷಗಳಿಂದಲೂ ಚಳ್ಳಕೆರೆ ತಾಲ್ಲೂಕಿನ ಗಡಿಭಾಗದಲ್ಲಿರೋ ಸೊಂಡೆಕೆರೆ ಗ್ರಾಮದ ರೈತರಿಗೆ ಯಾವುದೇ ಬೆಳೆ ವಿಮೆ ಜಮಾ ಆಗ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಸುತ್ತಮುತ್ತಲಿನ ಎಲ್ಲಾ ಗ್ರಾಮದ ರೈತರಿಗೆ ಫಸಲ್ ಭೀಮಾ ಯೋಜನೆ ಹಣ ಹಾಗೂ ಬೆಳೆ ವಿಮೆ ತಲುಪಿದೆ. ಆದ್ರೆ ನಮ್ಮ ಗ್ರಾಮದ ಜನರಿಗೆ ಯಾಕೆ ಅಧಿಕಾರಿಗಳು ತಾರತಮ್ಯ ಮಾಡ್ತಿದ್ದಾರೆ, ಹೀಗೆ ಮುಂದುವರೆದ್ರೆ ಮುಂದಿನ‌ ದಿನಗಳಲ್ಲಿ ನಾವು ಡಿಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. 

ಇನ್ನೂ ಈ ಬಗ್ಗೆ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ಅವರನ್ನೇ ವಿಚಾರಿಸಿದ್ರೆ, ಆ ರೀತಿ ಎಲ್ಲೂ ಆಗಿಲ್ಲ, ಮೀಟಿಂಗ್ ಮಾಡಿದ್ದೇನೆ. 75 ಕೋಟಿ ಈ ತಿಂಗಳು ಬಿದ್ದಿದೆ. ಹಂತ ಹಂತವಾಗಿ ಎಲ್ಲಾ ರೈತರಿಗೂ ಫಸಲ್ ಭೀಮಾ ಯೋಜನೆ ತಲುಪಲಿದೆ. ಆ ರೀತಿ ಒಂದೇ ಗ್ರಾಮಕ್ಕೆ ಸಮಸ್ಯೆ ಆಗ್ತಿದೆ ಅದರ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಭರವಸೆ ನೀಡಿದರು.

 ಒಟ್ನಲ್ಲಿ ರೈತರಿಗೆ ಅನುಕೂಲ ಆಗಲಿಕ್ಕೆ ಸರ್ಕಾರ ಹಲವು ಯೋಜನೆಗಳು ತಂದಿದ್ರೂ ರೈತರಿಗೆ ಸರಿಯಾಗಿ ತಲುಪುತ್ತಿಲ್ಲವಲ್ಲ ಎಂಬ ಬೇಸರ ಎಲ್ಲರಲ್ಲಿ ಮನೆ ಮಾಡಿದೆ. ಕೂಡಲೇ ಇದಕ್ಕೆ ನಾಂದಿ ಹಾಡಿ ರೈತರಿಗೆ ಅನುಕೂಲ‌ ವಾಗುವಂತೆ ಅಧಿಕಾರಿಗಳು ಆಡಳಿತ ನಡೆಸಲಿ ಎಂಬುದು ನಮ್ಮ ಆಶಯ.