- ಖಗೋಳ, ಭೂಗೋಳ ಶಾಸ್ತ್ರ ಅಗಾಧ ಪಾಂಡಿತ್ಯ ಹೊಂದಿರೋ ಬಾಲಕ
- ಯೂಟ್ಯೂಬ್ನಲ್ಲಿ ನೋಡಿಯೇ ಸಾಕಷ್ಟು ವಿಷಯ ಅರಿತಿರೋ ಪುಟಾಣಿ
- ಪದವಿ ಪೂರ್ವ, ಪದವಿ ಹಂತದ ವಿಷಯಗಳನ್ನೂ ಸುಲಲಿತವಾಗಿ ಹೇಳುವ ಬಾಲಕ
ಬಾಗಲಕೋಟೆ (ನ. 14): ಸಾಮಾನ್ಯವಾಗಿ ಮಕ್ಕಳು ಮೊಬೈಲ್ (Mobile) ನೋಡಿ ಹಾಳಾಗ್ತಾರೆ, ಓದು ಕಲಿಯೋದಿಲ್ಲ, ನಿರಾಸಕ್ತರಾಗ್ತಾರೆ, ಓದಿನಿಂದ ದೂರ ಉಳಿತಾರೆ ಅನ್ನೋ ಮಾತನ್ನ ನಾವು ಕೇಳ್ತಿವಿ, ಆದ್ರೆ ಇಲ್ಲೊಬ್ಬ ಬಾಲಕ ಮಾತ್ರ ಮೊಬೈಲ್ನಲ್ಲೇ ಇಡೀ ಜಗತ್ತಿನ ವಿಷಯ ತಿಳಿಯುತ್ತ, ಇಂದು ಅಗಾಧ ಪಾಂಡಿತ್ಯದೊಂದಿಗೆ ಬೆಳೆಯುತ್ತಿದ್ದಾನೆ.
ನಗರದ ಇಂಜಿನಿಯರಿಂಗ್ ಕಾಲೇಜ್ನ ಉಪನ್ಯಾಸಕ ರಾಮ್ ಪ್ರಸಾದ್ ಎಂಬುವವರ ಪುತ್ರ. ಈತನಿಗೆ ಇನ್ನೂ 7 ವರ್ಷ 10 ತಿಂಗಳು ವಯಸ್ಸು. ಈತ ತನ್ನ 4 ನೇ ವಯಸ್ಸಿನಲ್ಲಿಯೇ ಅಗಾಧ ಪಾಂಡಿತ್ಯ ಹೊಂದುತ್ತಾ ಬಂದಿದ್ದಾನೆ. ಇನ್ನೂ ಈ ಎಲ್ಲಾ ವಿಷಯಗಳನ್ನು ಯಾರಿಂದಲೋ ಕಲಿತಿದ್ದಲ್ಲ, ಬದಲಾಗಿ ಮೊಬೈಲ್, ಟ್ಯಾಬ್, ಯೂಟ್ಯೂಬ್ ಬಳಕೆಯಿಂದ. ಬಹುತೇಕ ಮಕ್ಕಳು ಮೊಬೈಲ್ ಹಿಡಿದು ಓದಿನಿಂದ ದೂರ ಉಳಿದರೆ ಇತ್ತ ಬಾಲಕ ವೆಂಕಟ ರಾಘವೇಂದ್ರ ಮಾತ್ರ ಅದರಿಂದಲೇ ಇಡೀ ಜಗತ್ತಿನ ಖಗೋಳ, ಭೂಗೋಳ ಮಾಹಿತಿ ಪಡೆಯತ್ತಾ ಜೊತೆಗೆ ಸೈನ್ಸ್, ಮ್ಯಾಥ್ಸ್ ಸೇರಿದಂತೆ ಎಲ್ಲ ವಿಧಧ ವಿಷಯಗಳನ್ನ ಸರಾಗವಾಗಿ ಸೈಂಟಿಸ್ಟ್ಗಳಂತೆ ನಿರರ್ಗಳವಾಗಿ ಹೇಳುತ್ತಾನೆ. ಹೀಗೆ ಹೇಳಿದ ವಿಷಯಗಳು ತಂದೆಗೂ ಸಹ ತಿಳಿಯದೇ ಹೋದಾಗ ತಂದೆ ಸಂಬಂದಪಟ್ಟ ಉಪನ್ಯಾಸಕರ ಬಳಿ ಕೊಂಡೊಯ್ದು ಈತನ ವಿಷಯಗಳನ್ನ ಕರಗತ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ವಿಜ್ಷಾನಿಯಾಗಬೇಕೆಂಬ ಆಶಯ ಹೊತ್ತ ಮಗನ ಗುರಿಗೆ ತಂದೆ ತಾಯಿಗಳು ಪ್ರೇರಿಪಿಸುತ್ತಿದ್ದಾರೆ.