Oct 8, 2020, 8:27 PM IST
ಚಿಕ್ಕಮಗಳೂರು(ಅ. 08) ಚಿಕ್ಕಮಗಳೂರು ಜಿಲ್ಲೆಯ ಅಡಿಕೆ ಬೆಳಗಾರ ಹೊಸ ರೋಗದಿಂದ ಕಂಗಾಲಾಗಿದ್ದಾರೆ. ಅಡಿಕೆಗೂ ವಿಚಿತ್ರ ವೈರಸ್ ಕಾಟ ಶುರುವಾಗಿದೆ. ವಿಚಿತ್ರ ಕಾಯಿಲೆ ಕೊರೊನಾ ವೈರಸ್ ನಂತೆ ತೋಟದಿಂದ ತೋಟಕ್ಕೆ ಹರಡ್ತಾ ಇರೋದು ಅತಂಕ ತಂದಿದೆ. ಕಳಸ ಸುತ್ತಮುತ್ತ ಅಡಿಕೆಗೆ ವಿಚಿತ್ರ ರೋಗ ಬಂದಿದ್ದು ಸ್ಥಳಕ್ಕೆ ಬಂದ ವಿಜ್ಞಾನಿಗಳನ್ನು ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ.
ವರುಣ ತಣ್ಣಾಗಾಗಿ ಕೊಂಚ ರಿಲೀಫ್ ಸಿಕ್ತು ಅನ್ನೋವಷ್ಟರಲ್ಲಿ ಕಳಸ ಸುತ್ತಮುತ್ತ ಅಡಿಕೆ ಬೆಳೆದವರಿಗೆ ಮತ್ತೊಂದು ತಲೆನೋವು ಶುರುವಾಗಿದೆ. ವಿಚಿತ್ರ ಕಾಯಿಲೆಯೊಂದು ಅಡಿಕೆಗೆ ಮಾರಕವಾಗ್ತಾ ಇದೆ. ವೈರಸ್ ಅಂತೇ ಹರಡೋಕಾಯಿಲೆಯಿಂದ ಕಂಗೆಟ್ಟು ಹೋಗಿರೋ ರೈತ್ರು ಸ್ಥಳಕ್ಕೆ ಬಂದ ವಿಜ್ಞಾನಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.ಕಣ್ಣಿಗೆ ಕಾಣದ ವೈರಸ್ ಆ ಬೆಳೆಯನ್ನೇ ತಿಂದು ಹಾಕ್ತಿದೆ. ಒಂದು ತುದಿಯಿಂದ ಇಡೀ ಮರಗಳು ಒಣಗುತ್ತಾ ಬರುತ್ತಿವೆ.