ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು ಎಂದು ನಾವು ಹೇಳುತ್ತಲೇ ಇರುತ್ತೇವೆ. ಆದರೆ ಆ ನಿಟ್ಟಿನಲ್ಲಿ ಪ್ರಯತ್ನ ಪಡುತ್ತೇವಾ..? ಉತ್ತರವನ್ನು ನಾವೇ ಕಂಡುಕೊಳ್ಳಬೇಕು.
ಚಿಕ್ಕಮಗಳೂರು (ಅ. 02): ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು ಎಂದು ನಾವು ಹೇಳುತ್ತಲೇ ಇರುತ್ತೇವೆ. ಆದರೆ ಆ ನಿಟ್ಟಿನಲ್ಲಿ ಪ್ರಯತ್ನ ಪಡುತ್ತೇವಾ..? ಉತ್ತರವನ್ನು ನಾವೇ ಕಂಡುಕೊಳ್ಳಬೇಕು.
ಹಿರೇಮಗಳೂರಿನ (Heeremagaluru) ಶ್ರೀಕೋದಂಡರಾಮ ದೇವಾಲಯದಲ್ಲಿ ಕನ್ನಡದಲ್ಲಿಯೇ ಪೂಜೆ ನಡೆಯುತ್ತದೆ. ಮಂತ್ರ ಪಠಣ, ಹೋಮ, ಹವನ ಹಾಗೂ ಮದುವೆಯೂ ಕನ್ನಡದಲ್ಲಿಯೇ ನಡೆಯುತ್ತದೆ. ಹಿರೇಮಗಳೂರು ಕಣ್ಣನ್ (Heeremagaluru Kannan) ಕನ್ನಡದಲ್ಲಿಯೇ ಕೋದಂಡರಾಮನಿಗೆ ಪೂಜೆ ಸಲ್ಲಿಸುತ್ತಾರೆ. ಈ ದೇವಾಲಯ ಒಳಹೊಕ್ಕರೆ ಗೋಡೆಗಳ ಮೇಲೆಲ್ಲಾ ಕನ್ನಡ ರಾರಾಜಿಸುವುದನ್ನು ನೋಡಬಹುದು. ಬರುವ ಭಕ್ತರಿಗೆ ಕನ್ನಡದಲ್ಲಿಯೇ ಶ್ಲೋಕದ ಅರ್ಥವನ್ನು ವಿವರಿಸಲಾಗುತ್ತದೆ. ಈ ಬಗ್ಗೆ ಕನ್ನಡದ ಪೂಜಾರಿ ಎಂದೇ ಖ್ಯಾತರಾಗಿರುವ ಹಿರೇಮಗಳೂರು ಕಣ್ಣನ್ ಮಾತುಗಳು.