ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!

ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!

Published : Oct 21, 2025, 07:56 PM IST

ವರದಕ್ಷಿಣೆ ಆಸೆಗಾಗಿ ಪತ್ನಿಯನ್ನು ಕೊಲೆ ಮಾಡಿ ಕೊಳವೆಬಾವಿಯಲ್ಲಿ ಎಸೆದಿದ್ದ ಪತಿಯೊಬ್ಬ, ತಾನು ಸಿಕ್ಕಿಬೀಳಬಾರದೆಂದು ದೇವಸ್ಥಾನದಲ್ಲಿ ಬರೆದಿಟ್ಟ ಪತ್ರದಿಂದಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಪತ್ರದ ಸುಳಿವಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆಯ ರಹಸ್ಯವನ್ನು ಬಯಲಿಗೆಳೆದಿದ್ದಾರೆ.

ಚಿಕ್ಕಮಗಳೂರು: ವರದಕ್ಷಿಣೆ ಮತ್ತು ಹಣದಾಸೆಗೆ ಹೆಂಡತಿಯನ್ನು ಕೊಲೆ ಮಾಡಿ, ಮೃತದೇಹವನ್ನು ಜಮೀನಿನ ಕೊಳವೆಬಾವಿಯಲ್ಲಿ ಎಸೆದಿದ್ದ ಅಮಾನವೀಯ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕೊಲೆಗೈದ ಪತಿ, ಪೊಲೀಸರ ಕೈಗೆ ಸಿಕ್ಕಿಬೀಳಬಾರದೆಂದು ದೇವಸ್ಥಾನವೊಂದಕ್ಕೆ ಬರೆದಿದ್ದ ವಿಚಿತ್ರ ಪತ್ರವೇ ಆತನ ಬಂಧನಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರು ಜಿಲ್ಲೆ ಹಾರೋಹಳ್ಳಿ ತಾಲೂಕಿನ ಎಂಬ ಪ್ರದೇಶದಲ್ಲಿ ವಾಸವಿದ್ದ ಗೌಡನ ಮಗನಿಗೆ ಪಕ್ಕದ ಊರಿನ ಯುವತಿ ಭಾರತಿಯನ್ನು (25) ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಕಾರು ಮತ್ತು ಬೈಕ್‌ ನೀಡಿ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಒಂದುವರೆ ವರ್ಷದ ಮುದ್ದಾದ ಹೆಣ್ಣು ಮಗು ಸಹ ಇತ್ತು. ಆದರೆ, ಮದುವೆಯಾದಾಗಿನಿಂದಲೂ ಪತಿ, ಅತ್ತೆ ಮತ್ತು ಮಾವನ ಹಣದಾಸೆ ತೀರದೆ ಭಾರತಿಯ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿತ್ತು.

ಕ್ಷುಲ್ಲಕ ಕಾರಣಕ್ಕೆ ಹತ್ಯೆ, ಕೊಳವೆಬಾವಿಯಲ್ಲಿ ದೇಹ:
ಘಟನೆ ನಡೆದ ದಿನ ಭಾರತಿ ತನ್ನ ತವರು ಮನೆಗೆ ಹಬ್ಬಕ್ಕೆ ಹೋಗಿ ಬರುವುದಾಗಿ ಗಂಡನ ಬಳಿ ಹೇಳಿದ್ದಾರೆ. ಹಣದಾಸೆಯಿಂದ ಕುರುಡಾಗಿದ್ದ ಪತಿ ಈ ಮಾತಿಗೆ ಸಿಟ್ಟಿಗೆದ್ದು, ಭಾರತಿಯ ಕಪಾಳಕ್ಕೆ ಬಾರಿಸಿದ್ದಾನೆ. ಇದರಿಂದ ಭಾರತಿ ನಿಯಂತ್ರಣ ತಪ್ಪಿ ಗೋಡೆಗೆ ತಲೆ ಬಡಿದು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ತಕ್ಷಣವೇ ವಿಚಲಿತರಾದ ಪತಿ ಮತ್ತು ಅತ್ತೆ-ಮಾವ ಮೂವರು ಸೇರಿ, ವಿಷಯ ಬಹಿರಂಗವಾಗದಂತೆ ನೋಡಿಕೊಳ್ಳಲು ನಿರ್ಧರಿಸಿದರು. ಕೊನೆಯ ಹಂತವಾಗಿ, ಮೃತದೇಹವನ್ನು ತಮ್ಮದೇ ಜಮೀನಿನಲ್ಲಿರುವ ಕೊಳವೆಬಾವಿಯೊಳಗೆ ಎಸೆದು, ನಂತರ ಭಾರತಿ ನಾಪತ್ತೆಯಾಗಿದ್ದಾಳೆಂದು ನಾಟಕವಾಡಿದರು. ತಮ್ಮ ಮಗಳ ಸುಳಿವು ಸಿಗದೇ ತವರು ಮನೆಯವರು ಹುಡುಕಾಟ ನಡೆಸುತ್ತಿದ್ದಾಗ, ಇತ್ತ ಪತಿ ತಾನು ಸಿಕ್ಕಿಬೀಳಬಾರದು ಎಂಬ ಭಯದಿಂದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದನು.

ದೇವರಿಗೆ ಬರೆದ ಪತ್ರವೇ ಸಾಕ್ಷಿ:
ಹತ್ಯೆಯ ನಂತರ ತನಿಖೆಯಿಂದ ಪಾರಾಗಲು ದೇವಸ್ಥಾನಗಳನ್ನು ಸುತ್ತುತ್ತಿದ್ದ ಆರೋಪಿ, ಒಂದು ದೇವಸ್ಥಾನದಲ್ಲಿ ದೇವಿಗೆ ಮನವಿ ರೂಪದಲ್ಲಿ ಒಂದು ಪತ್ರವನ್ನು ಬರೆದಿಟ್ಟಿದ್ದಾನೆ. ಈ ಪತ್ರದಲ್ಲಿ ಆತ ತನ್ನ ತಪ್ಪನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದು, ತಾನು ಮಾಡಿರುವ ಕೃತ್ಯ ಮತ್ತು ಅದರಿಂದ ಪಾರಾಗಲು ಹರಕೆಗಳನ್ನು ಕಟ್ಟಿಕೊಂಡ ಬಗ್ಗೆ ಉಲ್ಲೇಖಿಸಿದ್ದಾನೆ ಎನ್ನಲಾಗಿದೆ. ದೇವಸ್ಥಾನದಲ್ಲಿ ಸಿಕ್ಕ ಈ ಪತ್ರವೇ ಪೊಲೀಸರಿಗೆ ಮಹತ್ವದ ಸುಳಿವು ನೀಡಿದ್ದು, ಈ ಸುಳಿವಿನ ಆಧಾರದ ಮೇಲೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.

ಪೊಲೀಸರ ತನಿಖೆಯ ವೇಳೆ, ಆತ ಕೊಳವೆಬಾವಿಯಲ್ಲಿ ಹೆಂಡತಿಯ ಮೃತದೇಹ ಬಿಸಾಕಿರುವುದನ್ನು ಒಪ್ಪಿಕೊಂಡಿದ್ದು, ನಂತರ ಸುಮಾರು 15 ಅಡಿ ಆಳದಲ್ಲಿ ಭಾರತಿಯ ಮೃತದೇಹವನ್ನು ಪತ್ತೆ ಮಾಡಲಾಗಿದೆ. ಅಲ್ಲದೆ, ಭಾರತಿಯ ಆತ್ಮ ಭೂತವಾಗಬಾರದು ಎಂದು 3 ಹಂದಿಗಳನ್ನು ಸಹ ಬಲಿಕೊಟ್ಟಿದ್ದ ವಿಚಾರವೂ ತನಿಖೆಯಲ್ಲಿ ಬಯಲಾಗಿದೆ. ಕೊಲೆ ಮತ್ತು ಸಾಕ್ಷ್ಯನಾಶದ ಆರೋಪದಡಿ ಪತಿ ಮತ್ತು ಕುಟುಂಬ ಸದಸ್ಯರನ್ನು ಬಂಧಿಸಿರುವ ಪೊಲೀಸರು, ಪ್ರಕರಣದ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಕೇವಲ ಒಂದುವರೆ ವರ್ಷದ ಮಗುವಿಗೆ ತಾಯಿ ಇಲ್ಲವಾದ ಈ ಘಟನೆ ಸ್ಥಳೀಯವಾಗಿ ತೀವ್ರ ದುಃಖವನ್ನುಂಟು ಮಾಡಿದೆ.

24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more