Nov 15, 2021, 4:16 PM IST
ಬೆಂಗಳೂರು (ನ. 15): ಮಳೆಗಾಲ ಮುಗಿದು, ಚಳಿಗಾಲ ಆರಂಭವಾಗಿದೆ. ಆದರೆ ಮಳೆರಾಯ (Rain) ಮಾತ್ರ ಇನ್ನೂ ಸುರಿಯುತ್ತಲೇ ಇದ್ದಾನೆ. ಅಕಾಲಿಕ ಮಳೆಯಿಂದ ರೈತಾಪಿ ವರ್ಗ ಕಂಗಾಲಾಗಿದೆ. ಮಲೆನಾಡಿಗರು ಕೊಯ್ದಿರೋ ಕಾಫಿ (Coffee) ಒಣಗಿಸಲು ಆಗದೇ, ಅಡಿಕೆ ಕೊಯ್ಲು (Areca Nut) ಮಾಡಲಾಗದೇ ಪರದಾಡುವಂತಾಗಿದೆ. ಮನೆಯಂಗಳದಲ್ಲಿ ಬೆಳೆದ ಬೆಳೆ ಕೊಳೆಯುತ್ತಿದೆ.
Chikkamagaluru ಧಾರಾಕಾರ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲು
ಮೂಡಿಗೆರೆ ತಾಲೂಕಿನ ಮಾಳಿಗನಾಡು ಗ್ರಾಮದಲ್ಲಿ ವೃದ್ಧ ಗಜೇಂದ್ರ ಹೆಬ್ಬಾರ್ ಪ್ರಕೃತಿಯಿಂದ ಅಸಹಾಯಕರಾಗಿ ಮನೆಯಲ್ಲಿ ಮಲಗುವ ಮಂಚದ ಮೇಲೆ ಅಡಿಕೆ ಒಣಗಿಸುತ್ತಿದ್ದಾರೆ. ಮಲೆನಾಡಲ್ಲಿ ಕಳೆದ ಒಂದೆರಡು ತಿಂಗಳಿಂದಲೂ ಒಂದೆರಡು ದಿನ ಬಿಡುವ ನೀಡುವ ವರುಣದೇವ ಮತ್ತೆ ಧಾರಾಕಾರವಾಗಿ ಸುರಿಯುತ್ತಿದ್ದಾನೆ. ಯಾವಾಗಂದರೆ ಆವಾಗ ಮಳೆ, ಬಿಸಿಲು, ಮೋಡದ ಪರಿಸ್ಥಿತಿ ನಿರ್ಮಾಣವಾಗಿದೆ. ಅಡಿಕೆ-ಕಾಫಿ ಮಲೆನಾಡಿಗರ ಜೀವ. ಸಣ್ಣ-ಸಣ್ಣ ಹಿಡುವಳಿ ಮೂಲಕ ಬದುಕು ಕಟ್ಟಿಕೊಂಡಿವರೇ ಹೆಚ್ಚು. ಸಿಕ್ಕ-ಸಿಕ್ಕ ದಾರಿಯಲ್ಲಿ ಬೆಳೆಗಳನ್ನ ಉಳಿಸಿಕೊಂಡು ವರ್ಷದ ಬದುಕು ದೂಡಲು ಮುಂದಾಗಿದ್ದಾರೆ.