Chikkamgaluru: ರೋಪ್‌ ವೇ, ಸರ್ಕಾರದ ಘೋಷಣೆಗೆ ಪರಿಸರವಾದಿಗಳಿಂದ ತೀವ್ರ ವಿರೋಧ

Mar 10, 2022, 5:30 PM IST

ಚಿಕ್ಕಮಗಳೂರು (ಮಾ. 10):  ಬಜೆಟ್ ನಲ್ಲಿ ಕಾಫಿ ನಾಡಿನ ಪ್ರವಾಸೋಧ್ಯಮ ಅಭಿವೃದ್ದಿಗೆ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ರೋಪ್ ವೇ ಯೋಜನೆಯನ್ನು ಘೋಷಣೆ ಮಾಡಿದೆ ಸರ್ಕಾರ. ಘೋಷಣೆಯಾದ  ಬೆನ್ನಲ್ಲೇ ರೋಪ್ ವೇ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದೆ.ಪರಿಸರ ಪ್ರೇಮಿಗಳು ಯಾವುದೆ ಕಾರಣಕ್ಕೂ ಯೋಜನೆ ಬೇಡ್ವೇ ಬೇಡ , ಇದು ಶೋಲಾ ಅರಣ್ಯಕ್ಕೆ ಅಪಾಯ ಅಂತಿದ್ದಾರೆ.  
 ರಾಜ್ಯದ ಎತ್ತರ ಶಿಖರವಾಗಿರೋ ಮುಳ್ಳಯ್ಯನಗಿರಿ,ದತ್ತಪೀಠದಲ್ಲಿ ರೋಪ್ ವೇ ಯೋಜನೆ ಘೋಷಣೆಯಾಗಿದ ಬೆನ್ನಲೇ ವಿರೋಧ ವ್ಯಕ್ತವಾಗ್ತಾ ಇದೆ. ಶೋಲಾರಣ್ಯದಲ್ಲಿ ರೋಪ್ ವೇ ಯೋಜನೆ ಮಾಡೋದನ್ನು ಕೈಬಿಡುವಂತೆ ಒತ್ತಾಯವು ಕೇಳಿಬಂದಿದೆ.

Uttara Kannada: ಸುಮಾರು 1500 ಕ್ಕೂ ಹೆಚ್ಚು ಆಲಿವ್ ರಿಡ್ಲೇ ಸಮುದ್ರಕ್ಕೆ ಸೇರಿಸಿದ ಅರಣ್ಯ ಇಲಾಖೆ

ಮುಳ್ಳಯ್ಯನಗಿರಿ ಸಾಲಿನಲ್ಲಿರೋ ಶೋಲಾರಣ್ಯದಲ್ಲಿ ರೋಪ್ ವೇ ಮಾಡೋವಾಗ  ಅರಣ್ಯ ನಾಶವಾಗುತ್ತೇ ಅನ್ನೋದು ಅವ್ರ ವಾದ.. ಇನ್ನೂ ಆಳವಾದ ಗುಂಡಿಗಳನ್ನು ತೆಗೆಯೋದ್ರಿಂದ ಮುಂದೇ ಭೂಕುಸಿತವು ಅಗೋ ಭೀತಿಯು ಎದುರಾಗೋ ಸಾಧ್ಯತೆಯು ಇದೆ. ಇದಲ್ಲದೆ ಭದ್ರ ನದಿಯ ನೀರಿನ ಮೂಲಕ್ಕೆ ಧಕ್ಕೆಯಾಗುತ್ತೆ. ಕಾಡುಪ್ರಾಣಿಗಳಿಗೆ ಪ್ರವಾಸೋದ್ಯಮದ ಹೆಸ್ರಲ್ಲಿ ಜೀವಕ್ಕೆ ಹಾನಿಯಾಗುತ್ತೆ ಅನ್ನೋ ಆತಂಕವನ್ನು ಹೊರಹಾಕಿದ್ದಾರೆ.
 
ಒಟ್ಟಾರೆ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ದಿ ಪಡಿಸೋಕೆ ರಾಜ್ಯ ಸರ್ಕಾರವೇನೂ ಗಿರಿಸಾಲಿನಲ್ಲಿ ರೋಪ್ ವೇ ಯೋಜನೆಯನ್ನು ಘೋಷಿಸ್ತು. ಅದ್ರೆ ಪರಿಸರವಾದಿಗಳಂತೂ ತೀವ್ರ ವಿರೋಧ ವ್ಯಕ್ತಪಡಿಸ್ತಾ ಇದ್ದಾರೆ. ಸರ್ಕಾರ ಏನೂ ನಿರ್ಧಾರ ತೆಗೆದುಕೊಳ್ಳುತ್ತೋ ಅನ್ನೋದನ್ನು ಮಾತ್ರ ಕಾದುನೋಡಬೇಕಾಗಿದೆ.