ಒಂದು ಕೊಂಡರೇ ಮತ್ತೊಂದು ಉಚಿತ ಇದು ಶಾಪಿಂಗ್ ಮಾಲ್ ಆಫರ್ ಅಲ್ಲ ಸಿನಿಮಾ ಟಾಕೀಸ್ ಆಫರ್..! ಅರೇ, ಏನ್ರಿ ಇದು ಅಂತೀರಾ...?
ಬಳ್ಳಾರಿ (ಫೆ. 12): ಒಂದು ಕೊಂಡರೇ ಮತ್ತೊಂದು ಉಚಿತ ಇದು ಶಾಪಿಂಗ್ ಮಾಲ್ ಆಫರ್ ಅಲ್ಲ ಸಿನಿಮಾ ಟಾಕೀಸ್ ಆಫರ್..! ಅರೇ, ಏನ್ರಿ ಇದು ಅಂತೀರಾ...?
ಕೊರೋನಾ ಭೀತಿಯಿಂದ ಜನರು ಸಿನಿಮಾದತ್ತ ಮುಖ ಮಾಡ್ತಿಲ್ಲ. ಹೀಗಾಗಿ ಬಳ್ಳಾರಿ ಸಿನಿಮಾ ಟಾಕೀಸ್ ಹೊಸ ದೊಂದು ಆಫರ್ ನೀಡಿದ್ದಾರೆ. ಒಂದು ಟಿಕೆಟ್ ಕೊಂಡರೆ ಮತ್ತೊಬ್ಬರು ಉಚಿತವಾಗಿ ಹೋಗಬಹುದು. ಒನ್ + ಒನ್ ಆಫರ್ ! ಇದೇ ಮೊದಲ ಬಾರಿಗೆ ಥೇಟರ್ ನತ್ತ ಪ್ರೇಕ್ಷಕರನ್ನು ಸೆಳೆಯಲು ಸಿನಿಮಾದವರು ಈ ಆಫರ್ ಇಟ್ಟಿದ್ದಾರೆ.
10 ತಿಂಗಳ ನಂತರ ಈಗ ಪ್ರದರ್ಶನ ಆರಂಭಗೊಂಡಿದೆ. ಕೊರೋನಾ ಭೀತಿ ಕಡಿಮೆಯಾದ್ರೂ ಪ್ರೇಕ್ಷಕರು ಮಾತ್ರ ಸಿನಿಮಾ ಥೇಟರ್ ಗಳತ್ತ ಅಷ್ಟಾಗಿ ಬರುತ್ತಿಲ್ಲ. ಹೀಗಾಗಿ ವಿಕ್ ಎಂಡ್ ಶನಿವಾರ ಭಾನುವಾರ ಬಿಟ್ಟು ಉಳಿದ ದಿನಗಳಲ್ಲಿ ಈ ಆಫರ್ ಇಡಲಾಗಿದೆ.