Mar 22, 2020, 1:17 PM IST
ಬೆಳಗಾವಿ[ಮಾ.22]: ಬಿಜೆಪಿ ಶಾಸಕ ಅಭಯ್ ಪಾಟೀಲ್ ನಗರದಲ್ಲಿ ಸ್ಯಾನಿಟೈಸೇಷನ್ ಕೆಲಸವನ್ನ ಸ್ವತಃ ಮಾಡಿಸುತ್ತಿದ್ದಾರೆ. ನಗರದ ಶಿವಾಜಿ ಪಾರ್ಕ್ ನಲ್ಲಿ ಸ್ಯಾನಿಟೈಸೇಷನ್ ಕೆಲಸವನ್ನ ಮಾಡಿಸುತ್ತಿದ್ದಾರೆ. ಕೊರೋನಾ ವೈರಸ್ ಭೀತಿಯಿಂದ ಶಿವಾಜಿ ಪಾರ್ಕ್ ಸಂಪೂರ್ಣ ಖಾಲಿ ಖಾಲಿಯಾಗಿದೆ. ಇದರ ಜೊತೆಗೆ ಬೆಳಗಾವಿ ಜಿಲ್ಲಾದ್ಯಂತ ಕೊರೋನಾ ವೈರಸ್ ಹರಡಿರಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಜನತಾ ಕರ್ಫ್ಯೂಗೆ ವಿಜಯಪುರದಲ್ಲಿ ಭಾರೀ ಬೆಂಬಲ: ರಸ್ತೆಗಳೆಲ್ಲ ಖಾಲಿ ಖಾಲಿ
ಪ್ರಧಾನಿ ನರೇಂದ್ರ ಮೋದಿ ಅವರ ಜನತಾ ಕರ್ಫ್ಯೂಗೆ ಜಿಲ್ಲಾದ್ಯಂತ ಭಾರೀ ಬೆಂಬಲ ವ್ಯೆಕ್ತವಾಗಿದೆ. ಹೀಗಾಗಿ ಜನರು ಮನೆ ಬಿಟ್ಟು ಹೊರಗಡೆ ಬಂದಿಲ್ಲ.ನಗರದಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ನಿಂತಿದೆ.