Dec 20, 2022, 5:45 PM IST
ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮೇಲೆ ಟವರ್ ಅಳವಡಿಕೆ ಮಾಡಲಾಗಿದೆ. ಅಂದಿನ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ, ಈ ಟವರ್'ನ್ನು ಆಸ್ಪತ್ರೆಯ ಮೇಲೆ ಅಳವಡಿಸಲು ಅನುಮತಿ ನೀಡಿದ್ರಂತೆ. ಕಳೆದ ಹಲವು ವರ್ಷಗಳಿಂದ ಈ ಟವರ್ ತೆರವುಗೊಳಿಸಿ ಅಂತ ಟೆಲಿಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ತೆರವುಗೊಳಿಸಿಲ್ಲ. ಸುರಪುರದ ಸಾರ್ವಜನಿಕ ತಾಲೂಕು ಆಸ್ಪತ್ರೆಗೆ ಗ್ರಾಮೀಣ ಪ್ರದೇಶದಿಂದ ನೂರಾರು ರೋಗಿಗಳು ದಾಖಲಾಗ್ತಾರೆ. ಖಾಯಿಲೆ ನಿವಾರಣೆಗೆಂದು ಬರುವ ರೋಗಿಗಳಿಗೆ ಇನ್ನೊಂದು ರೋಗ ಬರುತ್ತೆ ಅನ್ನೋ ಭಯ ಕಾಡ್ತಿದೆ. ಈ ಟವರ್ ವಿಕಿರಣಗಳಿಂದ ರೋಗಿಗಳು ಮತ್ತೆ ಅನಾರೋಗ್ಯಕ್ಕೆ ತುತ್ತಾಗುವಂತಾಗುತ್ತದೆ. ಕೆಲವೇ ಸೆಕೆಂಡ್ ಗಳಲ್ಲಿ ಈ ಟವರ್ ವಿಕಿರಣಗಳು ಸಾವಿರಾರು ಪಟ್ಟು ಉತ್ಪತ್ತಿಯಾಗುತ್ತವೆ. ಇದರಿಂದ ಸಾಮಾನ್ಯವಾಗಿ ರೋಗಿಗಳ ಮೇಲೆ ಬಾರಿ ಪ್ರಮಾಣದಲ್ಲಿ ತೊಂದ್ರೆ ಆಗುತ್ತದೆ. ಈ ಬಗ್ಗೆ ಆರೋಗ್ಯ ಅಧಿಕಾರಿಗಳು ರೋಗಿಗಳಿಗೆ ತೊಂದರೆ ಆಗುತ್ತದೆ, ಟವರ್ ತೆರವುಗೊಳಿಸಿ ಬೇರೆ ಕಡೆ ಸ್ಥಳಾಂತರ ಮಾಡಿ ಅಂತ ಟೆಲಿಕಾಂ ಅಧಿಕಾರಿಗಳಿಗೆ ಪತ್ರ ಬರೆದ್ರೂ ಕ್ಯಾರೆ ಅಂತಿಲ್ವಂತೆ.