Dec 17, 2022, 3:21 PM IST
ಚಿಕ್ಕಬಳ್ಳಾಪುರ ನಗರದಲ್ಲಿ ವೈದ್ಯ ದಂಪತಿ ಸರ್ಕಾರಿ ಆಸ್ಪತ್ರೆ ಬಳಿ ಪ್ರತಿನಿತ್ಯ ಅನ್ನದಾಸೋಹ ಕಾರ್ಯಕ್ರಮ ಮಾಡುತ್ತಿದ್ದು, ಈ ದಂಪತಿಯ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಬರಿ ಆಸ್ಪತ್ರೆಗೆ ಬರುವ ಬಡವರಿಗೆ ಮಾತ್ರ ಅನ್ನದಾಸೋಹ ಮಾಡಿ ಸುಮ್ಮನಾಗದ ಈ ದಂಪತಿ, ವೃದ್ಧರಿರೂ ಹಾಗೂ ವಿಕಲಚೇತನರಿಗೂ ಕೂಡ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಪ್ರಾಯೋಗಿಕವಾಗಿ ಎರಡು ಕಾಲೊನಿಗಳಲ್ಲಿ ಸರ್ವೆ ನಡೆಸಿ ಊಟ ವಿತರಣೆಯನ್ನು ಮಾಡುತ್ತಿದ್ದಾರೆ. ಇದುವರೆಗೂ ಒಂದು ಲಕ್ಷ ಜನರಿಗೆ ಊಟ ನೀಡಿರುವ ತೃಪ್ತಿ ಇದ್ದು ಈ ಸೇವೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಹಾಗೆ ಮಂಗಳೂರಿನ ರಾಜ್ ಕುಮಾರ್ ಅವರು, ಉಪಯೋಗಿಸಿದ ಬಳಿಕ ಗುಜಿರಿಗೋ ಅಥವಾ ಯಾವುದೋ ಮೂಲೆಗೋ ಎಸೆಯೋ ವಸ್ತುಗಳಲ್ಲಿ ಹೊಸ ಕಲ್ಪನೆ ಬಿತ್ತುತ್ತಾರೆ.