BIG 3: 4 ವರ್ಷ ಕಳೆದರೂ ಕೊಡಗು ಪ್ರವಾಹ ಸಂತ್ರಸ್ತರಿಗೆ ಸಿಕ್ಕಿಲ್ಲ ಸೂರು!

Nov 23, 2022, 4:35 PM IST

ಕೊಡಗು (ನ. 23): ಬಡವರಿಗಾಗಿ ಸರ್ಕಾರ ನೂರೆಂಟು ಯೋಜನೆಗಳನ್ನ ತರುತ್ತೆ. ಇಂಪ್ಲಿಮೆಂಟ್ ಕೂಡ ಆಗುತ್ತೆ. ಆದ್ರೆ, ಅದನ್ನ ಫಲಾನುಭವಿಗಳಿಗೆ ಕೊಡದೇ ಹೇಗೆಲ್ಲ ಸತಾಯಿಸ್ತಾರೆ ಗೊತ್ತಾ? ಯೆಸ್, 2018, ಅಂದು  ಇಡೀ  ರಾಜ್ಯದ ಜನರನ್ನ ಕಂಗೆಡಿಸಿದ ದಿನ, ಎಲ್ರಲ್ಲೂ, ಭಯ, ಆತಂಕ, ದುಗುಡ, ಕಣ್ಣೀರು,  ಯಾಕಂದ್ರೆ ಕೊಡಗಿನಲ್ಲಿ ಭೀಕರ ಪ್ರವಾಹದ ಹೊಡೆತಕ್ಕೆ ಭೂ ಕುಸಿತ ಉಂಟಾಯ್ತು. ಭೂ ಕುಸಿತಕ್ಕೆ ಅದೆಷ್ಟೋ ಜನ ಮನೆಗಳನ್ನ ಕಳೆದುಕೊಂಡ್ರು. ದಿಕ್ಕು ತೋಚದಂತೆ ಆಯ್ತು.  ಇಡೀ ಕರುನಾಡು ಅವತ್ತು ಕೊಡಗಿನ  ಜನರ ಸಂಕಷ್ಟಕ್ಕೆ ಮಿಡಿಯಿತು. 2018ರ ಸಮ್ಮಿಶ್ರ  ಸರ್ಕಾರ ಕೂಡ ಜನರ ನೆರವಿಗೆ ಧಾವಿಸಿತು. ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿ ಕೊಡುವ ಭರವಸೆಯನ್ನು ನೀಡಿತು. ಅದರಂತೆ ಮನೆಗಳ ನಿರ್ಮಾಣ ಕಾಮಗಾರಿ ಶುರು ಆಯ್ತು. 

ಅಂದು, ಮನೆ ಕಳೆದುಕೊಂಡವರಿಗೆ 10 ತಿಂಗಳಲ್ಲಿಯೇ ಮನೆ ನಿರ್ಮಿಸಿ ಕೊಡೋ ಭರವಸೆಯನ್ನು ನೀಡಿತ್ತು. ಅದುವರೆಗೆ ಪ್ರತಿ ತಿಂಗಳು ಮನೆಯ ಬಾಡಿಗೆ ಕೊಡುವ ಭರವಸೆ ನೀಡಿತ್ತು.ಆದ್ರೆ, 10 ತಿಂಗಳ ನಂತರ ಸರ್ಕಾರ ಬಾಡಿಗೆ ಕೊಡೋದನ್ನ ನಿಲ್ಲಿಸಿ ಬಿಟ್ಟಿತು. ಕೊಡಗು  ಜಿಲ್ಲೆಯಲ್ಲಿ  ಮನೆ  ಕಳೆದುಕೊಂಡವರಿಗೆ  ಸರ್ಕಾರದಿಂದ ನಿರ್ಮಿಸಿದ ಆಶ್ರಯ ಮನೆಗಳನ್ನ ಹಂತ ಹಂತವಾಗಿ ನೀಡಲಾಗಿದೆ. ಆದ್ರೆ, ಮಡಿಕೇರಿ ತಾಲೂಕಿನ .ಕೆ. ನಿಡುಗಣೆ  ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಆಗಿದ್ರು ಇಲ್ಲಿ ತನಕ ಹಂಚಿಕೆ ಮಾಡಿಲ್ಲ. 

10 ಅಲ್ಲ, 20 ಅಲ್ಲ ಬರೋಬ್ಬರಿ 70 ಮನೆಗಳು ನಿರ್ಮಾಣ ಆಗಿದೆ. ಫಲಾನುಭವಿಗಳಿಗೆ ಇಲ್ಲಿ ತನಕ ಹಸ್ತಾಂತರ ಮಾಡಿಲ್ಲ. ಹೀಗಾಗಿ ಇವರೆಲ್ಲ ಇವತ್ತಿಗೂ ಅದೆಂಥ ದುಸ್ಥಿಯಲ್ಲಿ ಇದ್ದಾರೆ ನೋಡಿ. ಒಂದು ಕಡೇ ಮೂಲಭೂತ ಸೌಕರ್ಯವಿಲ್ಲ. ಮತ್ತೊಂದು ಕಡೇ ಕೂಲಿನಾಲಿ ಮಾಡಿ ಬಾಡಿಗೆ ಕಟ್ಟಬೇಕಾದ ಪರಿಸ್ಥಿತಿ ಇವರದ್ದು. 

ಇದನ್ನೂ ನೋಡಿBIG 3: ಉದ್ಘಾಟನೆಯಾಗದೆ ಪಾಳು ಬಿದ್ದಿರುವ ರಾಯಚೂರಿನ ಅಂಬೇಡ್ಕರ್ ಭವನ

ಈಗಾಗಲೇ ಈ ಫಲಾನುಭವಿಗಳು 2022ರ ಜೂನ್ ತಿಂಗಳಲ್ಲಿ ಅಂದರೇ ಈ ವರ್ಷದ ಮಳೆಗಾಲಕ್ಕೂ ಮುನ್ನವೇ ಈ  70 ಕುಟುಂಬಗಳು ಅಧಿಕಾರಿಗಳನ್ನ ಭೇಟಿ ಮಾಡಿದ್ರು. ಆಗ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳನ್ನ ಕೇಳಿದ್ರೆ ಸಣ್ಣಪುಟ್ಟ ಕೆಲಸ ಇದ್ದು ಹಸ್ತಾಂತರ ಮಾಡೋದಾಗಿ ಭರವಸೆ ನೀಡಿದ್ರು. ಆದ್ರೆ, ಇಲ್ಲಿ ತನಕವು ಯಾರಿಗೂ ಹಂಚಿಕೆ ಮಾಡದೇ ಉಡಾಫೆ ಮಾಡ್ತಿದ್ದಾರೆ ಅಂತಾರೆ ಫಲಾನುಭವಿಗಳು.  ಒಟ್ಟಿನಲ್ಲಿ ಸರ್ಕಾರದಿಂದ ಮನೆಗಳು ನಿರ್ಮಾಣ ಆಗಿದ್ರು ಫಲಾನುಭವಿಗಳಿಗೆ ಹಂಚಿಕೆ ಮಾಡೋಕೆ ಇಷ್ಟು ದಿನ ಬೇಕ. ಸಂಬಂಧಪಟ್ಟ ಅಧಿಕಾರಿಗಳೇ, ಜನಪ್ರತಿನಿಧಿಗಳೇ ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್3ಯಲ್ಲಿ  ವರದಿ ಪ್ರಸಾರ ಆದ್ಮೇಲಾದ್ರೂ ಎಚ್ಚೆತ್ತುಕೊಳ್ತಾರಾ ನೋಡೋಣ