ಬೀದರ್: ಕೆಮಿಕಲ್ ಫ್ಯಾಕ್ಟರಿ ಹಟಾವ್ , ಜನತಾ ಕೊ ಬಚಾವ್.! ಏನಿವರ ಸಮಸ್ಯೆ..?

Sep 4, 2021, 3:12 PM IST

ಬೀದರ್ (ಸೆ. 04): ಇಲ್ಲಿರುವ ಕೆಮಿಕಲ್ ಕಾರ್ಖಾನೆಗಳು ನೇರವಾಗಿ ಹಳ್ಳ, ಕೊಳ್ಳಗಳಿಗೆ ವಿಷಕಾರಿ ತ್ಯಾಜ್ಯ ಬಿಡುತ್ತಿವೆ. ಆ ವಿಷಕಾರಿ ತ್ಯಾಜ್ಯ ಎಷ್ಟೊಂದು ಡೇಂಜರ್ ಆಗಿದೆ ಅಂದ್ರೆ ಇಲ್ಲಿವರೆಗೂ ಪ್ರಾಣಿ, ಪಕ್ಷಿಗಳು, ಜಾನುವಾರುಗಳ ಸಾವಿಗಂತು ಲೆಕ್ಕವೇ ಇಲ್ಲ,. ಫಲವತ್ತಾಗಿ ಬೆಳೆಯುವ ಬೆಳೆಗಳು ಕೂಡ ಅಲ್ಲಿನ ಪ್ರದೇಶದಲ್ಲಿ ಕುಂಟಿತವಾಗ್ತಿವೆ.

ಬ್ಯಾಂಕ್ ನೌಕರಿ ಬಿಟ್ಟು ಗಾಣದ ಎಣ್ಣೆ ವ್ಯಾಪಾರೋದ್ಯಮ ಆರಂಭಿಸಿ ಯಶಸ್ಸು ಕಂಡ ಯುವೋದ್ಯಮಿ
  
ಹಳ್ಳಕ್ಕೆ ಬಿಡಲಾಗುತ್ತಿರುವ ವಿಷಕಾರಿ ತ್ಯಾಜ್ಯದಿಂದ ಎಷ್ಟೋ ಜನರಿಗೆ ಚರ್ಮರೋಗಕ್ಕೆ ತುತ್ತಾಗಿದ್ದಾರೆ.  ತಜ್ಞರು ಹೇಳುವ ಪ್ರಕಾರ ಈ ತ್ಯಾಜ್ಯ ಮಿಶ್ರಿತವಾಗಿರುವ ನೀರು ಕುಡಿಯೋದು ಬಿಡಿ ಉಪಯೋಗಕ್ಕೂ ಯೋಗವಿಲ್ಲ ಎನ್ನುತ್ತಾರೆ. ಈಗಾಗಲೇ ಹುಮನಾಬಾದ್ ಸುತ್ತಲಿನ ಗಡವಂತಿ ಮತ್ತು ಮಾಣಿಕನಗರದಲ್ಲಿನ ನಿವಾಸಿಗಳು ನಮ್ಮ ಊರಿನಲ್ಲಿನ ಬಾವಿಯಲ್ಲಿನ ನೀರುಗಳು ಗಬ್ಬು ನಾರುತ್ತಿವೆ, ಕೆಲವರಂತು ಊರು ಬಿಟ್ಟು ವಲಸೆ ಹೋಗುತ್ತಿದ್ದಾರೆ,. ಕೂಡಲೇ ಇಲ್ಲಿನ ಕಾರ್ಖಾನೆಗಳನ್ನ ಸ್ಥಳಾಂತರಿಸಿ ನಮ್ಮನ್ನು ಉಳಿಸಿ ಎಂದು ಅಂಗಲಾಚುತ್ತಿದ್ದಾರೆ.  ಜನಪ್ರತಿನಿಧಿಗಳೇ ದಯವಿಟ್ಟು ಗಮನ ಹರಿಸಿ.