
ಬೆಂಗಳೂರು: ರಾಜ್ಯದಲ್ಲಿ ನಡೆದ ಎರಡು ಬೇರೆ ಬೇರೆ ಪ್ರಕರಣಗಳು ಮಾನವ ಸಂಬಂಧಗಳಲ್ಲಿನ ಸಂಕೀರ್ಣತೆ ಮತ್ತು ದುರಂತ ಅಂತ್ಯಗಳನ್ನು ಬಿಚ್ಚಿಟ್ಟಿವೆ. ಒಂದು ಕಡೆ, ಪತಿಯ ವಿಪರೀತ ಕಾಮದಾಹ ಮತ್ತು ಅಶ್ಲೀಲ ಕಿರುಕುಳದಿಂದ ಬೇಸತ್ತ ಪತ್ನಿಯಿಂದಲೇ ಗಂಡನ ಹತ್ಯೆ ನಡೆದರೆ, ಮತ್ತೊಂದೆಡೆ ಪೋಷಕರಿಗೆ ಹೆದರಿ ಪ್ರೇಮಿಗಳು ರೈಲಿಗೆ ತಲೆಕೊಟ್ಟು ದುರಂತ ಅಂತ್ಯ ಕಂಡಿದ್ದಾರೆ.
1. ಒನಕೆ ಮಹಾದೇವಿ: ಅಶ್ಲೀಲ ವಿಡಿಯೋ ಟಾರ್ಚರ್‌ನಿಂದ ಪತಿ ಹತ್ಯೆ:
ಸುಮಾರು 25 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗಳಿಗೆ ಇಬ್ಬರು ಮಕ್ಕಳು ಮತ್ತು ಮೊಮ್ಮಕ್ಕಳಿದ್ದರು. ಗಂಡನಿಗೆ ಸರ್ಕಾರಿ ಕೆಲಸವಿದ್ದು, ಮಗ ದುಬೈನಲ್ಲಿದ್ದರೆ, ಮಗಳು ಬಾಣಂತನಕ್ಕಾಗಿ ತವರಿಗೆ ಬಂದಿದ್ದಳು. ಮೊಮ್ಮಕ್ಕಳೊಂದಿಗೆ ಆಡಿ ಸಂತೋಷವಾಗಿರಬೇಕಿದ್ದ ವಯಸ್ಸಿನಲ್ಲಿ ಈ ದಂಪತಿ ನಿತ್ಯವೂ ಜಗಳವಾಡುತ್ತಿದ್ದರು. ಇದಕ್ಕೆಲ್ಲ ಕಾರಣ 50ಕ್ಕೂ ಹೆಚ್ಚು ವಯಸ್ಸಿನ ಗಂಡನ ವಿಕೃತ ಕಾಮದಾಹ.
ಲೈಂಗಿಕ ಕಿರುಕುಳ ಮತ್ತು ಕೊಲೆ:
ಮನೆಯಲ್ಲಿ ಎಲ್ಲರೂ ಮಲಗಿದ ನಂತರ ಪ್ರತಿದಿನ ಪತ್ನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇಷ್ಟೇ ಅಲ್ಲದೆ, ಅವಳು ಇಷ್ಟಪಡದಿದ್ದರೂ ಬಲವಂತವಾಗಿ ಅಶ್ಲೀಲ ವಿಡಿಯೋಗಳನ್ನು ತೋರಿಸಿ, ಅದರಂತೆಯೇ ನಾವೂ ಮಾಡೋಣವೆಂದು ಟಾರ್ಚರ್ ನೀಡುತ್ತಿದ್ದ. ಮಕ್ಕಳಿದ್ದಾರೆ, ಮೊಮ್ಮಕ್ಕಳಿದ್ದಾರೆ ಎಂಬುದನ್ನು ಮರೆತು ಗಂಡನ ವಿಕೃತ ವರ್ತನೆ ಮುಂದುವರೆದಿದ್ದರಿಂದ, 25 ವರ್ಷಗಳ ಕಾಲ ಹಿಂಸೆ ಅನುಭವಿಸಿದ ಪತ್ನಿಯ ತಾಳ್ಮೆ ಕಟ್ಟೆ ಒಡೆದಿತ್ತು.
ಆ ದಿನ, ಮತ್ತೆ ಕೆಟ್ಟ ವಿಡಿಯೋ ತೋರಿಸಲು ಬಂದ ಗಂಡನೊಂದಿಗೆ ಜಗಳ ನಡೆದಿದೆ. ವಿಕೃತ ಕಾಟದಿಂದ ಬೇಸತ್ತ ಪತ್ನಿ, ಮನೆಯಲ್ಲಿದ್ದ ಒನಕೆಯಿಂದಲೇ ಪತಿಯ ತಲೆಗೆ ಹೊಡೆದು ಅವನನ್ನು ಕೊಲೆ ಮಾಡಿದ್ದಾಳೆ. ಈ ಘಟನೆ ಮಗಳ ಎದುರಲ್ಲೇ ನಡೆದಿದೆ ಎಂದು ತಿಳಿದುಬಂದಿದೆ. ಕೆಟ್ಟ ಗಂಡನ ಕಥೆಯನ್ನು ಕೊನೆಗೊಳಿಸಿದ ಈ ಪತ್ನಿಯ ಕೃತ್ಯಕ್ಕೆ ಕಾರಣ ಗಂಡನ ವಿಕೃತ ಮನಸ್ಸು ಮತ್ತು ಲೈಂಗಿಕ ಕಿರುಕುಳ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
2. ಹೆತ್ತವರಿಗೆ ಹೆದರಿ ರೈಲಿಗೆ ತಲೆ ಕೊಟ್ಟ ಅಪ್ರಾಪ್ತ ಪ್ರೇಮಿಗಳು:
ಇವರಿಬ್ಬರೂ ಅಪ್ರಾಪ್ತರು; ಕಾಲೇಜಿಗೆ ಹೋಗುತ್ತಿದ್ದ ಹದಿಹರೆಯದ ವಿದ್ಯಾರ್ಥಿಗಳು. ಓದಿನ ವಯಸ್ಸಿನಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಪ್ರೇಮಲೋಕದಲ್ಲಿ ವಿಹರಿಸುತ್ತಿದ್ದ ಈ ಜೋಡಿ, 'ನನ್ನನ್ನು ಬಿಟ್ಟರೆ ನಿನಗೆ ಯಾರು ಇಲ್ಲ' ಎಂಬ ನಿರ್ಧಾರಕ್ಕೆ ಬಂದಿದ್ದರು. ಇವರ ವಿಚಾರ ತಿಳಿದ ಪೋಷಕರು ಅವರಿಗೆ ಬುದ್ಧಿ ಹೇಳಿದ್ದರು. ಆದರೆ, ಪೋಷಕರ ಮಾತು ಕೇಳದ ಈ ಜೋಡಿ ಅಂತಿಮವಾಗಿ ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾಗಿದ್ದಾರೆ. ಸಾಯುವುದಕ್ಕೂ ಮೊದಲು ಇಬ್ಬರೂ ಚಾಕ್ಲೇಟ್ ತಿಂದಿರುವುದು ಪತ್ತೆಯಾಗಿದೆ. 'ವಯಸ್ಸಲ್ಲದ ವಯಸ್ಸಿನಲ್ಲಿ ಲವ್ ಮಾಡಿದ್ದೇ ತಪ್ಪಾಯ್ತು' ಎಂದು ಭಾವಿಸಿ ಅವರು ಇಂತಹ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಪೋಷಕರಿಗೆ ಈ ಪ್ರೀತಿ ವಿಚಾರ ಗೊತ್ತಿಲ್ಲ ಎಂದು ಅವರು ಹೇಳಿಕೆ ನೀಡಿದ್ದರೂ, ಹದಿಹರಿಯದ ವಯಸ್ಸಿನಲ್ಲಿ 'ಅಫೆಕ್ಷನ್' ಅನ್ನೇ 'ಪ್ರೀತಿ' ಎಂದು ತಪ್ಪಾಗಿ ತಿಳಿದು ಇಂತಹ ದುರಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಯುವ ಪೀಳಿಗೆಗೆ ಈ ಕಥೆ ಪಾಠವಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಬಾಳಬೇಕಿದ್ದ ಎರಡು ಜೀವಗಳು ಪ್ರೀತಿಗಾಗಿ ಮಸಣ ಸೇರಿದ್ದು ವಿಪರ್ಯಾಸ.