Bengaluru Garbage: ಈ ಗ್ರಾಮಗಳ ಯುವಕರಿಗೆ ಹೆಣ್ಣು ಕೋಡೊದಿಲ್ವಂತೆ, ಕಂಕಣಭಾಗ್ಯ ಕಸಿದ ಕಸ!

Bengaluru Garbage: ಈ ಗ್ರಾಮಗಳ ಯುವಕರಿಗೆ ಹೆಣ್ಣು ಕೋಡೊದಿಲ್ವಂತೆ, ಕಂಕಣಭಾಗ್ಯ ಕಸಿದ ಕಸ!

Published : Dec 04, 2021, 05:41 PM IST

- ಈ ಗ್ರಾಮಗಳಿಗೆ ಹೆಣ್ಣು ಕೋಡೊದಿಲ್ಲ, ಯುವಕರ ಕಂಕಣಭಾಗ್ಯ ಕಸಿದ ಕಸ!

- ಸಂಬಂಧಿಕರು ಒಮ್ಮೆ ಬಂದರೇ ಮತ್ತೆ ವಾಪಸ್‌ ಬರುವ ಪ್ರಶ್ನೆಯೇ ಇಲ್ಲ!

- ಕಸದಿಂದ ಕಳೆದ  3 ವರ್ಷದಿಂದ ಅರಸಮ್ಮನ ಜಾತ್ರೆಯೇ ಸ್ಥಗಿತ
 

ಬೆಂಗಳೂರು (ಡಿ. 04):  ದೊಡ್ಡಬಳ್ಳಾಪುರ-ಕೊರಟಗೆರೆ (Doddaballapur Koratagere) ಕ್ಷೇತ್ರದ ಗಡಿರೇಖೆಯ ಮೇಲಿರುವ ಎಂಎಸ್‌ಜಿಪಿ ಇನ್ ಪ್ರಾ ಟೇಕ್ ಘನತ್ಯಾಜ್ಯ ವಿಲೇವಾರಿ ಘಟಕ  ದೊಡ್ಡಬಳ್ಳಾಪುರ, ಕೊರಟಗೆರೆ ಕ್ಷೇತ್ರದ ರೈತರ ಬದುಕಿಗೆ 6 ವರ್ಷದಿಂದ ಮಾರಕ ಆಗಿದೆ. ಈ ಘಟಕದಿಂದ ಹೊರ ಬರುವ ಅನಿಲ ಮತ್ತು ಕಸದ ರಾಶಿಯ ಕೊಳಚೆ (Garbage) ನೀರು ಕೊರಟಗೆರೆ ಕ್ಷೇತ್ರದ ಮಾವತ್ತೂರು ಕೆರೆಗೆ ಸೇರಿ ನೀರು (Polluted Water) ಕಲುಷಿತಗೊಂಡಿದೆ.  

ಎಂಎಸ್‌ಜಿಪಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಸರಕಾರ ಸ್ಥಳೀಯ ಗ್ರಾಮ ಪಂಚಾಯ್ತಿಯ ಪರವಾನಿಗೆ (License)  ಪಡೆದಿಲ್ಲ. ಭಕ್ತರಹಳ್ಳಿ ಗ್ರಾಪಂಯಿಂದ ನಾಲ್ಕು ಬಾರಿ ನೋಟಿಸ್ ಜಾರಿ ಮಾಡಿದರೂ ಘಟಕದ ಮಾಲೀಕರು ಉತ್ತರ ನೀಡಿಲ್ಲ,  ಘಟಕಕ್ಕೆ ಪ್ರತಿನಿತ್ಯ 8 ರಿಂದ 10ಸಾವಿರ ಟನ್ ಕಸ ಬರುತ್ತಿದೆ. ಅಳತೆ ಮೀರಿ ತರುವ ಕಸ ವಿಲೇವಾರಿ ಆಗದೇ ಕೊಳೆತು ಭೂಮಿಗೆ ಸೇರಿ ಅಂತರ್ಜಲ ಮಟ್ಟ ವಿಷಮಯವಾಗಿದೆ. ಇದ್ರಿಂದ ಸುಮಾರು 100 ಗ್ರಾಮದ ಜನರಿಗೆ ಚರ್ಮ ರೋಗ, ಶ್ವಾಸಕೋಶದ ತೊಂದರೆ, ಕಿಡ್ನಿಯಲ್ಲಿ ಕಲ್ಲು ಸೇರಿದಂತೆ ಹಲವು ಕಾಯಿಲೆಗಳು ಬರುತ್ತಿವೆ.  ನಮ್ಮ ಗ್ರಾಮಕ್ಕೆ ಹೆಣ್ಣು ಕೂಡಲು ಯಾರು ಮುಂದೆ ಬರುತ್ತಿಲ್ಲ. ಸಂಬಂಧಿಕರ ಮನೆಗೆ ಬಂದರೇ ಅರ್ಧಗಂಟೆಯು ಇರೋದಿಲ್ಲ. ನಮ್ಮ ಊರಿನ ಗ್ರಾಮದೇವತೆ ಅರಸಮ್ಮ ಜಾತ್ರೆ ನಿಲ್ಲಿಸಿ ಐದು ವರ್ಷವಾಗಿದೆ. ಅಂತರ್ಜಲ ಮಟ್ಟ ಕಲುಷಿತವಾಗಿ ಕುಡಿಯಲು ನೀರು ಸಿಗದಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ. 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more