Aug 22, 2020, 3:00 PM IST
ಬೆಳಗಾವಿ(ಆ.22): ಸುವರ್ಣ ನ್ಯೂಸ್ ವರದಿಗೆ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಂದಿಸಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಜನರು ಪ್ರವಾಹದ ಸಂದರ್ಭದಲ್ಲಿ ಜನರು ತಮ್ಮ ಜೀವವನ್ನ ಕೈಯಲ್ಲಿ ಹಿಡಿದುಕೊಂಡು ನೀರಿನಲ್ಲಿ ಸಂಚಾರ ಮಾಡುತ್ತಿದ್ದರು.
ಡಿಸಿಎಂ ಲಕ್ಷ್ಮಣ ಸವದಿ ತವರಲ್ಲಿ ನೆರೆಯಿಂದ ನರಳಾಟ: ಜೀವ ಕೈಯಲ್ಲಿ ಹಿಡಿದು ಡೇಂಜರಸ್ ಪ್ರಯಾಣ
ಈ ಬಗ್ಗೆ ಸುವರ್ಣ ನ್ಯೂಸ್ ವರದಿಯನ್ನ ಪ್ರಸಾರ ಮಾಡಿತ್ತು. ವರದಿ ಬಳಿಕ ಸಿಎಂ ಯಡಿಯೂರಪ್ಪ ಬೆಳಗಾವಿ ಜಿಲ್ಲಾಧಿಕಾರಿಗೆ ಕರೆ ಮಾಡಿ ಗ್ರಾಮಸ್ಥರಿಗೆ ಓಡಾಡಲು ತಕ್ಷಣ ಬೋಟ್ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ.