ಬೆಳಗಾವಿಯ ಖಾನಾಪುರದಲ್ಲಿ, ಪತ್ನಿಯ ಶೀಲ ಶಂಕಿಸಿದ ಪತಿಯೊಬ್ಬ ಆಕೆಯನ್ನು ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ, ಥಳಿಸಿ ಕೊಲೆ ಮಾಡಿದ್ದಾನೆ. ನಂತರ ಪತ್ನಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆಂದು ನಾಟಕವಾಡಿದ್ದು, ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬಿದ್ದಿದೆ. ಆರೋಪಿ ಅವಿನಾಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯಲ್ಲಿ ಪತಿಯೇ ಪತ್ನಿಯ ಶೀಲ ಶಂಕಿಸಿ ಭೀಕರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಹೆಣದ ಬಟ್ಟೆಯನ್ನು ಬಿಚ್ಚಿದಾಗ ಕೊಲೆಯ ರಹಸ್ಯ ಬಯಲಾಗಿದೆ. ಈತ ಮಕ್ಕಳ ಮುಂದೆಯೇ ತನ್ನ ಹೆಂಡತಿಯ ಬಟ್ಟೆ ಬಿಚ್ಚಿ ಬೆತ್ತಲೆಗೊಳಿಸಿ ಭೀಕರವಾಗಿ ಥಳಿಸಿ ಕೊಲೆ ಮಾಡಿದ್ದಾನೆ. ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ನಂತರ ಹೆಂಡತಿಗೆ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದ್ದಾಳೆ ಎಂದು ನಾಟಕ ಮಾಡಿದ್ದಾನೆ. ಇದೀಗ ಸತ್ಯ ಬಯಲಾಗುತ್ತಿದ್ದಂತೆ ಪೊಲೀಸರ ಅತಿಥಿಯಾಗಿದ್ದಾನೆ.
ಈ ಘಟನೆ ಬೆಳಗಾವಿಯ ಖಾನಾಪುರದ ಕಾಪೋಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿ ಅವಿನಾಶ್ ಬಾಳೇಕುಂದ್ರಿ ಎಂಬಾತನೇ ತನ್ನ ಹೆಂಡತಿ ಕಿರಣಾ ಬಾಳೇಕುಂದ್ರಿ (30) ಕೊಲೆಯಾದ ಮಹಿಳೆ ಆಗಿದ್ದಾರೆ. 2016ರಲ್ಲಿ ಈ ಜೋಡಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ, ಇದೀಗ ಪತ್ನಿಯನ್ನೇ ಕೊಲೆಗೈದು, ಅದಾದ ಬಳಿಕ ನಾಟಕವಾಡಿದ್ದು, ಸಂಬಂಧಿಕರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಹೆಂಡತಿ ಕಿರಣಾ ಅವರು ಜೀವನ ನಿರ್ವಹಣೆಗಾಗಿ ಜನರಲ್ ಸ್ಟೋರ್ ಇಟ್ಟುಕೊಂಡಿದ್ದರು. ಆದರೆ, ಅಂಗಡಿಗೆ ಬರುವವರ ಜೊತೆಗೆ ತನ್ನ ಹೆಂಡತಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಸಂಶಯ ವ್ಯಕ್ತಪಡಿಸಿ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಮಕ್ಕಳಿಬ್ಬರೂ ಅಮ್ಮನಿಗೆ ಹೊಡೆಯಬೇಡಿ ಎಂದು ಬೇಡಿಕೊಂಡರೂ ಕೇಳದೇ ರಾಕ್ಷಸೀ ಕೃತ್ಯ ಮೆರೆದಿದ್ದಾನೆ. ಇನ್ನು ಹೆಂಡತಿ ಸತ್ತ ಬಳಿಕ ಆಕೆಯ ಮನೆಯವರು ಬರುವುದಕ್ಕೂ ಮೊದಲು ಅಗ್ನಿಸ್ಪರ್ಶ ಮಾಡಿ ಹೆಂಡತಿಯ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದನು. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಬಣ್ಣ ಬಯಲಾಗಿದೆ.