Jan 22, 2023, 10:45 AM IST
ಬೆಂಗಳೂರು: ಸೋಲಾರ್ ಯೋಜನೆ ನೆಪದಲ್ಲಿ ಹಣ ಕಬಲಿಸಲು ಬೆಂಗಳೂರು ವಿವಿ ಮುಂದಾಯ್ತಾ ಎಂಬ ಪ್ರಶ್ನೆ ಎದುರಾಗಿದೆ. ವಿವಿ ಆವರಣದ ಎಲ್ಲಾ ಹಾಸ್ಟೆಲ್‌ಗೆ ಫ್ಯಾನ್ ಅಳವಡಿಕೆಗೆ ಮುಂದಾಗಿದ್ದು, ಸುಮಾರು ಮೂರು ತಿಂಗಳಿನಿಂದ ಸೋಲಾರ್ ಅಳವಡಿಸುತ್ತೇವೆ ಎನ್ನುತ್ತಿದ್ದಾರೆ. ಆದರೆ ಈವರೆಗೂ ಕಾಮಗಾರಿಯೂ ಇಲ್ಲ, ಫ್ಯಾನು ಇಲ್ಲ ಹಾಗೂ ಸೋಲಾರೂ ಇಲ್ಲ. ಇನ್ನು ಕಾಮಗಾರಿ ಮುಗಿಯದೆ ವಿದ್ಯಾರ್ಥಿಗಳ ಓದಿಗೂ ತೊಂದರೆಯಾಗುತ್ತಿದೆ. ಇದು ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತಾಗಿದೆ.