ಕೊರೋನಾ ರಿಪೋರ್ಟ್ ಬರುವ ಮುನ್ನವೇ ಕ್ವಾರಂಟೈನ್‌ನಲ್ಲಿದ್ದ 600 ಜನ ರಿಲೀಸ್..!

May 31, 2020, 12:08 PM IST

ಬೆಳಗಾವಿ(ಮೇ.31): ಹೊರರಾಜ್ಯಗಳಿಂದ ಬಂದಂತಹ 600 ಜನ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಇವರ ಕೊರೋನಾ ರಿಪೋರ್ಟ್ ಫಲಿತಾಂಶ ಹೊರಬರುವ ಮುನ್ನವೇ ಹೊರಬಂದಿದ್ದಾರೆ. ಈ ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ.

ಮುಂಬೈ ಸೇರಿದಂತೆ ಹೊರರಾಜ್ಯಗಳಿಂದ ಬಂದ 600 ಮಂದಿಯನ್ನು ಅಥಣಿಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಸರ್ಕಾರದ ಆದೇಶದ ನೆಪ ಹೇಳಿ ಬೆಳಗಾವಿ ಜಿಲ್ಲಾಡಳಿತ ಈ ಆರು ನೂರು ಮಂದಿಯನ್ನು ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆ ಮಾಡಲಾಗಿದೆ. 

ಅವರಿಗೆಲ್ಲರಿಗೂ ಕೊರೋನಾ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಆದರೆ ಅದರ ಫಲಿತಾಂಶ ಹೊರಬರುವ ಮುನ್ನವೇ ಕ್ವಾರಂಟೈನ್‌ನಿಂದ ರಿಲೀಸ್ ಮಾಡಿ ಜಿಲ್ಲಾಡಳಿತ ಕೈತೊಳೆದುಕೊಂಡಿದೆ. ಒಂದು ವೇಳೆ ಹೆಚ್ಚುಕಡಿಮೆಯಾದರೆ ಬೆಳಗಾವಿ ಜಿಲ್ಲೆ ದೊಡ್ಡ ಬೆಲೆಯನ್ನೇ ತೆರಬೇಕಾಗಬಹುದು.

ಭಾನುವಾರದ ಕರ್ಫ್ಯೂ ರದ್ದು: ರಾಜ್ಯಾದ್ಯಂತ ಎಂದಿನಂತೆ ಜನಜೀವನ

ಕೆಲವು ದಿನಗಳ ಹಿಂದಷ್ಟೇ ಬೆಳಗಾವಿ ಜಿಲ್ಲಾಡಳಿತ ಇದೇ ತಪ್ಪನ್ನು ಮಾಡಿತ್ತು. ಆಗ 13 ಮಂದಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಹಳೆಯ ಪ್ರಮಾದದಿಂದ ಬುದ್ದಿ ಕಲಿಯದ ಜಿಲ್ಲಾಡಳಿತ ಇದೀಗ ಬೋರ್ಗಲ್ಲ ಮೇಲೆ ಮಳೆ ಸುರಿದಂತೆ ಎಂಬಂತೆ ಮತ್ತದೇ ತಪ್ಪು ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.