Feb 21, 2023, 11:35 AM IST
ಯಾದಗಿರಿಯಲ್ಲಿ ಟಿಪ್ಪು ಸುಲ್ತಾನ್ ಸರ್ಕಲ್ ಕೋಮು ಕದನದ ಕಿಡಿ ಹೊತ್ತಿಸಿದೆ. ನಗರಸಭೆ ವತಿಯಿಂದ ವೀರ ಸಾವರ್ಕರ್ ಸರ್ಕಲ್‌ಗೆ ಅನುಮೋದನೆ ನೀಡಲಾಗಿದ್ದು, ಟಿಪ್ಪು ಸರ್ಕಲ್ ತೆರವುಗೊಳಿಸದಿದ್ರೆ ನಾವೇ ತೆರವುಗೊಳಿಸುತ್ತೇವೆ ಎಂದು ನಗರ ಸಭೆಗೆ ಹಿಂದೂ ಸಂಘಟನೆಗಳ ಮುಖಂಡರ ಎಚ್ಚರಿಕೆ ನೀಡಿದ್ದಾರೆ. ಟಿಪ್ಪು ಸರ್ಕಲ್ ಅನಧಿಕೃತವಾಗಿ ನಿರ್ಮಿಸಿರುವ ಆರೋಪವಿದ್ದು, ಇದಕ್ಕೆ ಸಂಬಂಧಿಸಿದಂತೆ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಹೇಳಲಾಗಿದೆ.