ಬೆಂಗಳೂರು ಹೈಟೆನ್ಷನ್ ವೈರ್‌ ಕೆಳಗೆ ಮನೆಕಟ್ಟಿದವರಿಗೆ ಈಗ ಟೆನ್ಶನ್!

Feb 5, 2023, 1:12 PM IST

ಬೆಂಗಳೂರು (ಫೆ.05): ಸಿಲಿಕಾನ್ ಸಿಟಿಯಲ್ಲಿ  ಹೈಟೆನ್ಷನ್ ವೈಯರ್ ತಗುಲಿ ಸಾವು ನೋವುಗಳ ಸಂಖ್ಯೆ ಜಾಸ್ತಿಯಾಗ್ತಿದೆ. ಎಷ್ಟೋ ಅಮಾಯಕ ಜೀವಗಳನ್ನ ಈ ಡೆಡ್ಲಿ ಹೈ ಟೆನ್ಯನ್ ವೈಯರ್ಗಳು ಬಲಿ ಪಡೆದಿವೆ. ಇದೀಗ ಸಾಲು ಸಾಲು ಸರಣಿ ಸಾವಿನ ಬಳಿಕ ಕೆಪಿಟಿಸಿಎಲ್ ಹಾಗೂ ಬಿಬಿಎಂಪಿ ಎಚ್ಚೆತ್ತುಕೊಳ್ಳಲು ಮುಂದಾಗಿದೆ. ಇದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಇಂಧನ ಇಲಾಖೆ ಎಚ್ಚೆತ್ತುಕೊಂಡಿದ್ದು, ಅನಧಿಕೃತ ಕಟ್ಟಡಗಳನ್ನು ಸರ್ವೆ ಮಾಡಿದೆ. ಅನಧಿಕೃತ ಕಟ್ಟಡ ಮಾಲೀಕರಿಗೆ ಬಿಸಿ ಮುಟ್ಟಿಸೋದಕ್ಕೆ ಕೆಪಿಟಿಸಿಎಲ್ ಸಜ್ಜು ಆಗ್ತಿರೋದು, ಕಟ್ಟಡ ಮಾಲೀಕರಿಗೆ ಕಂಟಕ ಎದುರಾಗಿದೆ. 

ಇತ್ತೀಚೆಗೆ ಮಹಾಲಕ್ಷ್ಮಿ ಲೇಔಟ್, ಆರ್ಟಿನಗರದಲ್ಲಿ ಹೈಟೆನ್ಶನ್ ವೈಯರ್ ತಗುಲಿ ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ರು. ಇದಾದ  ನಂತರ ಇಂಧನ ಇಲಾಖೆ ಹಾಗೂ ಬಿಬಿಎಂಪಿ ಮೈಕೊಡವಿ ಎಚ್ಚೆತ್ತುಕೊಂಡಿದೆ.  ಹೈ ಟೆನ್ಶನ್ ವೈಯರ್ ಹಾದು ಹೋಗಿರುವ ಕೆಳಗೆ ಮನೆಗಳನ್ನು ಕಟ್ಟಿಕೊಂಡಿರುವ ಅನಧಿಕೃತ ಕಟ್ಟಡಗಳನ್ನು ಕೆಪಿಟಿಸಿಎಲ್ ಲೆಕ್ಕ ಹಾಕಿದೆ. ದೇವನಹಳ್ಳಿ, ಎಲೆಕ್ಟ್ರಾನ್ ಸಿಟಿ, ನೆಲಮಂಗಲ, ಹೆಬ್ಬಾಳ ಸೇರಿದಂತೆ ನಗರದಾದ್ಯಂತ ಕೆಪಿಟಿಸಿಎಲ್ ಕಳೆದವಜನವರಿ 20 ರಿಂದ 30ರವರೆಗೆ ಸರ್ವೆ ನಡೆಸಿ 7,722 ಅನಧಿಕೃತ ಕಟ್ಟಡಗಳ ಲೆಕ್ಕವನ್ನು ಬಿಬಿಎಂಪಿಗೆ ನೀಡಿದೆ. ಅಲ್ಲದೆ ಅನಧಿಕೃತ  ಮನೆಗಳಿಗೆ  ನೋಟಿಸ್ ಕೊಟ್ಟು ತೆರವು ಮಾಡಿ ಅಂತ ಕೆಪಿಟಿಸಿಎಲ್  ಬಿಬಿಎಂಪಿ ಗೆ ಮನವಿಯನ್ನ ಮಾಡ್ಕೊಂಡಿದೆ.