ಕನಕದಾಸ ಜಯಂತಿ ನಿಮಿತ್ತ ಬಳ್ಳಾರಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮ| ಕಾರ್ಯಕ್ರಮಕ್ಕೂ ಮುನ್ನ ಕನಕ ಮೂರ್ತಿಗೆ ಮಾಲಾರ್ಪಣೆ ಮಾಡಿದ ಶಾಸಕರು|
ಬಳ್ಳಾರಿ(ಡಿ.03): ಶಾಸಕ ಸೋಮಶೇಖರ ರೆಡ್ಡಿ ಅವರು ಭರ್ಜರಿಯಾಗಿ ಡೋಲು ಬಡಿಯುವ ಮೂಲಕ ಗಮನ ಸೆಳೆದಿದ್ದಾರೆ. ಹೌದು, ಇಂದು(ಗುರುವಾರ) ಕನಕದಾಸ ಜಯಂತಿ ನಿಮಿತ್ತ ಬಳ್ಳಾರಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸೋಮಶೇಖರ ರೆಡ್ಡಿ ಡೋಲು ಬಡಿದಿದ್ದಾರೆ.
'ಹಿಂದೂ -ಮುಸ್ಲಿಂ ಕ್ರಾಸ್ ಬೀಡ್‌ನಿಂದ ಬಹಳಷ್ಟು ಜನ ಹುಟ್ಟಿದಾರ್ರಿ...'
ಶಾಸಕ ಸೋಮಶೇಖರ ರೆಡ್ಡಿ ಅವರು ಕಾರ್ಯಕ್ರಮಕ್ಕೂ ಮುನ್ನ ಕನಕ ಮೂರ್ತಿಗೆ ಮಾಲಾರ್ಪಣೆ ಮಾಡಿದ್ದಾರೆ. ಮಾಲಾರ್ಪಣೆ ಬಳಿಕ ಶಾಸಕ ಸೋಮಶೇಖರ್ ರೆಡ್ಡಿ ಡೋಲು ಬಡಿದು ಸಂಭ್ರಮಪಟ್ಟಿದ್ದಾರೆ. ಇದೇ ವೇಳೆ ಡೋಲು ಮುಖಂಡರು ಮತ್ತು ವಾದ್ಯದವರು ಸೋಮಶೇಖರ್ ರೆಡ್ಡಿ ಅವರಿಗೆ ಡೋಲು ಬಡಿಯುವಂತೆ ಹೇಳಿದಾಗ, ಡೋಲು ಬಡಿದು ಸಂಭ್ರಮಿಸಿದ್ದಾರೆ.